ಬೈಂದೂರು: ಬೈಂದೂರು ಭಾಗದ ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಠದಮನೆ ಸಾಂಪ್ರದಾಯಿಕ ಕಂಬಳೋತ್ಸವ ಬುಧವಾರ ಅತ್ಯಂತ ಯಶಸ್ವಿಯಾಗಿ ನಡೆಯಿತು. ತಗ್ಗರ್ಸೆ ಕಂಠದಮನೆಯ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ತಗ್ಗರ್ಸೆ ಕಂಬಳೋತ್ಸವ ಸಾರ್ವಜನಿಕರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.ಸಾಂಪ್ರದಾಯಿಕ ಚೌಕಟ್ಟಿನಲ್ಲಿ ನಡೆಯುವ ಬೈಂದೂರು ಭಾಗದ ಅತ್ಯಂತ ದೊಡ್ಡ ಕಂಬಳ ಇದಾಗಿದ್ದು ಕೃಷಿಕರ ಸಮಾಗಮ ಮತ್ತು ಸಂಭ್ರಮ ಅತ್ಯಂತ ಸಂತಸ ನೀಡಿದೆ ಎಂದರು. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ಸುಮಾರು 50ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಗೌರವಾಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು,ಸದಾಶಿವ ಡಿ.ಪಡುವರಿ,ಬಾಲಕೃಷ್ಣ ಹೆಗ್ಡೆ ಕಂಠದಮನೆ,ಉದಯ ಹೆಗ್ಡೆ ತಗ್ಗರ್ಸೆ,ಅರವಿಂದ ಪೂಜಾರಿ ನಾಡ,ಪುಷ್ಪರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಿಶೋರ ಸಸಿಹಿತ್ಲು ಸ್ವಾಗತಿಸಿದರು.ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ತಗ್ಗರ್ಸೆ ಕಂಬಳೋತ್ಸವದ ಫಲಿತಾಂಶ.
ಹಲಗೆ ವಿಭಾಗ ಪ್ರಥಮ:ಆತ್ಮಜ್ ನೀರಜ್ ಬಾರ್ಕೂರು
ದ್ವಿತೀಯ:ತೆಕ್ಕಟ್ಟೆ ಮೇಲ್ಹತ್ಲುಮನೆ ದಿ.ಆನಂದ ದೇವಾಡಿಗ
ಹಗ್ಗ ವಿಭಾಗ ಹಿರಿಯ
ಪ್ರಥಮ:ಪನ್ನಗ ಹೆಬ್ಬಾರ್ ಭಟ್ಕಳ
ಹಗ್ಗ ವಿಭಾಗ ದ್ವಿತೀಯ: ದಿ.ಶೀನ ಪೂಜಾರಿ ಕೋಟ ಮಣೂರು ಪಡುಕೆರೆ
ಹಗ್ಗ ವಿಭಾಗ ಕಿರಿಯ ಎ ಪ್ರಥಮ: ಮಂಜುನಾಥ ಗೌಡ ಗೋಳಿಹೊಳೆ
ದ್ವಿತೀಯ: ಆಸಿಕಾನ ಜೋಗನಮನೆ ಭಟ್ಕಳ
ಹಗ್ಗ ವಿಭಾಗ ಕಿರಿಯ ಬಿ ಪ್ರಥಮ: ಮಂಜುನಾಥ ಮೆತ್ತಿನಮನೆ ಮಯ್ಯಡಿ
ದ್ವಿತೀಯ: ಸಮೃದ್ದಿ ಪ್ರಸಿದ್ದಿ ಶ್ರೀ ದುರ್ಗಾ ಪ್ರೆಂಡ್ಸ್ ಕಂಚಿಕಾನ್
ವರದಿ/ಗಿರಿ ಶಿರೂರು
ಚಿತ್ರ: ದೊಟ್ಟಯ್ಯ ಪೂಜಾರಿ ಶಬರಿ ಸ್ಟುಡಿಯೋ ಯಡ್ತರೆ