ಬೈಂದೂರು: ರಾಜ್ಯ ಸರಕಾರ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ.ರಾಜ್ಯದ ಮುಖ್ಯಮಂತ್ರಿಗಳು ರೈತರ ಪರವಾಗಿದ್ದಾರೆ.ಬೈಂದೂರಿನಲ್ಲಿ ಕಳೆದ 80 ದಿನಗಳಿಂದ ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.ಒಂದೆರಡು ದಿನ ಹೋರಾಟ ನಡೆಸುವುದೆ ಕಷ್ಟ ಆದರೆ ಬೈಂದೂರು ರೈತ ಸಂಘ ಮೂರು ತಿಂಗಳಿಂದ ಅನಿಧಿ೯ಷ್ಟಾವಧಿ ಧರಣಿ ಧರಣಿ ನಡೆಸುತ್ತಿರುವುದು ಜಿಲ್ಲೆಗೆ ಇತಿಹಾಸವಾಗಲಿದೆ. ರೈತರನ್ನು ನಿರ್ಲಕ್ಷಿಸುವುದು ಜಿಲ್ಲಾಡಳಿತಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಶೋಭೆಯಲ್ಲ. ರೈತರ ಹೋರಾಟಕ್ಕೆ ಸಮಸ್ತ ಬೈಂದೂರು ಜನತೆಯ ಸಹಕಾರ ಇದೆ.ಮುಂದಿನ ದಿನದಲ್ಲಿ ರೈತರ ಹೋರಾಟಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಬಿಜೂರು ಹೇಳಿದ್ದಾರೆ.ಅವರು ಮಂಗಳವಾರ ರೈತ ಸಂಘ ಬೈಂದೂರು ಇದರ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು 80ನೇ ದಿನದ ಧರಣಿಗೆ ಆಗಮಿಸಿ ಮಾತನಾಡಿ ಒಂದು ಒಳ್ಳೆಯ ಉದ್ದೇಶದಿಂದ ನೂರಾರು ರೈತರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.ಇಲಾಖೆ ಹಾಗೂ ಅಧಿಕಾರಿಗಳ ನಿರ್ಲಕ್ಷದ ವಿರುದ್ದ ಅರೆಬೆತ್ತಲೆ ಪ್ರತಿಭಟನೆಗೆ ಮುಂದಾಗಿರುವುದು ಜಿಲ್ಲಾಡಳಿತಕ್ಕೆ ಮುಜುಗರ.ರಾಜ್ಯಮಟ್ಟದಲ್ಲಿ ಬೈಂದೂರು ಸುದ್ದಿಯಾಗುತ್ತದೆ.ಹೀಗಾಗಿ ರಾಜ್ಯ ಸರಕಾರ ಶೀಘ್ರ ರೈತರಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.
