ಶಿರೂರು : ಶಿರೂರು ಕೆಳಪೇಟೆ ಬಳಿ ನಿರಂತರ ಅಪಘಾತ ನಡೆಯುತ್ತಿದ್ದು ಕಳೆದ ವಾರ ರಿಕ್ಷಾ ಹಾಗೂ ಪಿಕಫ್ ವಾಹನ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು ಇದರಿಂದಾಗಿ ಸಾರ್ವಜನಿಕರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.ಇದಕ್ಕೆ ಸ್ಪಂಧಿಸಿದ ಹೆದ್ದಾರಿ ಇಲಾಖೆ ಅಪಘಾತ ನಡೆಯುತ್ತಿರುವ ಸ್ಥಳದಲ್ಲಿ ಪಾರ್ಕಿಂಗ್‌ಗೆ ಮತ್ತು ಬಸ್ಸುಗಳನ್ನು ನಿಲ್ಲಲು ಹೆಚ್ಚುವರಿ ಡಾಂಬರೀಕರಣ ನಡೆಸಿದೆ.ಅಪಘಾತ ನಿಯಂತ್ರಣಕ್ಕಾಗಿ ಹಂಪ್‌ಗಳನ್ನು ಅಳವಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಅರುಣ್ ಕುಮಾರ್ ಶಿರೂರು,ಯೋಗಿಶ್ ಶಿರೂರು,ಕೋಟಿ ಪೂಜಾರಿ ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

two × 1 =