ಬೈಂದೂರು: ಬೈಂದೂರು ಪೊಲೀಸ್ ಠಾಣೆ ಇದರ ಸಹಯೋಗದಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಜಾಗೃತಿ ಅಭಿಯಾನ-2025 ಮತ್ತು ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾವಿಧಿ ಕಾರ್ಯಕ್ರಮ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ನಡೆಯಿತು.

ಬೈಂದೂರು ಠಾಣೆಯ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್.ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ ನಷ್ಟಕ್ಕೆ ಒಳಗಾಗಿ ಸಂಕಷ್ಟಕ್ಕೆ ಒಳಗಾಗುವ ಮೊದಲು ಸ್ವಯಂ ಜಾಗೃತಿ ಅತ್ಯಂತ ಅವಶ್ಯಕ.ಸೈಬರ್ ಅಪರಾಧ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುವವರಲ್ಲಿ ವಿದ್ಯಾವಂತರೇ ಅಧಿಕವಾಗಿದ್ದಾರೆ. ವಂಚನೆ ಘಟಿಸಿದ ತಕ್ಷಣವೇ ರಾಷ್ಟ್ರೀಯ ಸೈಬರ್ ಸಹಾಯವಾಣಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡ ಬೇಕು.ಯಾವುದೇ ಅನಪೇಕ್ಷಿತ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಆಲೋಚಿಸಬೇಕು. ಪಾಸ್ವರ್ಡ್ ಸೇರಿದಂತೆ ಯಾವುದೇ ಖಾಸಗಿ ಮಾಹಿತಿಗಳನ್ನು ಸುರಕ್ಷತೆ ಇಲ್ಲದೆ ಹಂಚಿಕೊಳ್ಳ ಬಾರದು ಎಂದರು.

ಕ್ರೈಂ ಇನ್ಸ್‌ಪೆಕ್ಟರ್ ನವೀನ ಬೋರಕರ್ ಪ್ರತಿಜ್ಞಾ ವಿಧಿ ಭೋದಿಸಿದರು. ಕಾಲೇಜಿನ ಪ್ರಾಂಶುಪಾಲ  ನಾಗರಾಜ ಶೆಟ್ಟಿ, ಕಾಲೇಜನಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಏಕತಾ ದಿವಸದ ಪ್ರಯುಕ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು ಹಾಗೂ ಎನ್.ಡಿ.ಪಿ.ಎಸ್  ಕಾಯ್ದೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಘಟಕದಿಂದ ಹೊರತಂದಿರುವ ಕ್ಯೂ ಆರ್ ಕೋಡ್ ಕಾರ್ಯನಿರ್ವಹಿಸುವ ಪ್ರಕ್ರಿಯೆ ಕುರಿತು ಮಾಹಿತಿ ನೀಡಲಾಯಿತು.

 

Leave a Reply

Your email address will not be published. Required fields are marked *

six + 4 =