ಬೈಂದೂರು; ರೋಟರಿ ಕ್ಲಬ್ ಬೈಂದೂರು ಇದರ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ಬೈಂದೂರಿನಲ್ಲಿ ನಡೆಯಿತು. ಉದ್ಯಮಿ ಹಾಗೂ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಕುಟುಂಬಗಳ ನಡುವೆ ಬಾಂಧವ್ಯ ವೃದ್ಧಿಸಲು ಮಕ್ಕಳಲ್ಲಿ ಸ್ನೇಹ ಭಾವನೆಯನ್ನು ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ರೊ. ಜಾನ್ಸಿ ಥಾಮಸ್, ಸಹಾಯಕ ಗವರ್ನರ್ ಐ ನಾರಾಯಣ್, ಜೋನಲ್ ಲೆಫ್ಟಿನೆಂಟ್ ಪ್ರಸಾದ್ ಪ್ರಭು,ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದ ಕೆ,ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ,ಹಾಗೂ ರೋಟರಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
