ಬೈಂದೂರು: ಇತ್ತೀಚಿಗೆ ಮಂಗಳೂರಿನಲ್ಲಿ ಗುರು ದೀಕ್ಷೆ ಸ್ವೀಕರಿಸಿದ ಜೆಜ್ವಿತ್ ಸಭಾ ಕರ್ನಾಟಕ ಪ್ರಾಂತ್ಯದ ವಂದನೀಯ ಧರ್ಮಗುರು ಪೃಥ್ವಿ ರೊಡ್ರಿಗಸ್ ರವರಿಗೆ ಬೈಂದೂರಿನ ಹೋಲಿಕ್ರಾಸ್ ಚರ್ಚ್‌ನಲ್ಲಿ ಕ್ರೈಸ್ತ ಬಾಂಧವರ ಪರವಾಗಿ ಚರ್ಚ್ ನ ಧರ್ಮಗುರು ರೆ.ಪಾ. ವಿನ್ಸೆಂಟ್ ಕುವೆಲ್ಲೊ ರವರು ಸಮ್ಮಾನಿಸಿದರು.
ಉಪಾಧ್ಯಕ್ಷ ಸ್ಟೇಪನ್ ಡಾಯಸ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಸಂಯೋಜಕಿ ಅನಿತಾ ನಜ್ರೆತ್ ,ಸಿಸ್ಟರ್ ಅನ್ಸಿಪಾವ್ಲ್ ಮತ್ತು ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು. ವಂದನೀಯ ಪೃಥ್ವಿ ರೊಡ್ರಿಗಸ್ ರವರು ಮುಂದಿನ ಎಪ್ರಿಲ್ ತಿಂಗಳ ತನಕ ಬೈಂದೂರಿನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಲಿದ್ದಾರೆ.