ಬೈಂದೂರು: ಮೊಗವೀರ ಯುವ ಸಂಘಟನೆ (ರಿ.) ಬೈಂದೂರು – ಶಿರೂರು ಘಟಕ, ಡಾ.ಜಿ ಶಂಕರ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು, ರೋಟರಿ ಕ್ಲಬ್ ಬೈಂದೂರು, ದೇವಾಡಿಗ ಒಕ್ಕೂಟ ರಿ ಬೈಂದೂರು, ರಕ್ತನಿಧಿ ಕೆ.ಎಂ.ಸಿ ಮಣಿಪಾಲ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬೈಂದೂರು ರೋಟರಿ ಸಮುದಾಯದ ಭವನದಲ್ಲಿ ನಡೆಯಿತು.
ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ದಾನಗಳಲ್ಲಿ ರಕ್ತದಾನ ಬಹಳ ಪ್ರಮುಖವಾಗಿದ್ದು ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ರಕ್ತದಾನ ಈಗಾಗಲೇ ಶಿಬಿರಗಳ ಮೂಲಕ ದಾನಿಗಳಿಂದ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಅತಿ ಹೆಚ್ಚಿದ್ದು ಈ ಕೊರತೆಯನ್ನು ನಿಗೀಸುವ ಸಲುವಾಗಿ ಅತಿ ಹೆಚ್ಚು ಶಿಬಿರಗಳನ್ನು ಆಯಾ ಭಾಗದಲ್ಲಿ ಸ್ಥಳೀಯ ಸಂಘಟನೆಗಳ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮೊಗವೀರ ಯುವ ಸಂಘಟನೆ ರಿ ಬೈಂದೂರು ಶಿರೂರು ಘಟಕ ಅಧ್ಯಕ್ಷ ಸೋಮಶೇಖರ್ ಜಿ.ಕಸ್ಟಂ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಸಹಾಯಕ ಗವರ್ನರ್ ಐ ನಾರಾಯಣ, ವಿಶ್ವಕರ್ಮ ಯುವಕ ಸಂಘಟನೆ ಬೈಂದೂರು ಅಧ್ಯಕ್ಷ ನಾಗರಾಜ್ ಆಚಾರ್ಯ ಬಂಕೇಶ್ವರ, ದೇವಾಡಿಗ ಒಕ್ಕೂಟ ರಿ ಬೈಂದೂರು ಅಧ್ಯಕ್ಷ ರಾಘವೇಂದ್ರ ದೇವಾಡಿಗ ಕಳವಾಡಿ, ರಕ್ತನಿಽ ಕೆ.ಎಂ.ಸಿ ಮಣಿಪಾಲ ವೈದ್ಯೆ ಡಾ.ಸ್ನೇಹ ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆ ಬೈಂದೂರು ಶಿರೂರು ಘಟಕದ ಕಾರ್ಯದರ್ಶಿ ಚಂದ್ರಶೇಖರ ಮೊಗವೀರ ಸೂರ್ಕುಂದ ಸ್ವಾಗತಿಸಿದರು.ಸ್ಥಾಪಕಾಧ್ಯಕ್ಷ ಪಾಂಡುರಂಗ ಮೊಗವೀರ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.