ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಸೇರಿಸಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ.ತರಾತುರಿಯಲ್ಲಿ ಅರಣ್ಯ ಭಾಗಗಳನ್ನು ಮಾಹಿತಿ ನೀಡದೆ ಅಧಿಕಾರಿಗಳು ಸಿದ್ದಪಡಿಸಿದ ವರದಿಯಿಂದ ಈ ಗೊಂದಲವಾಗಿದೆ.ಗ್ರಾಮೀಣ ಭಾಗದ ಮುಕ್ತಿಗಾಗಿ ರೈತರು ಹೋರಾಟ ನಡೆಸುತ್ತಿರುವುದು ನ್ಯಾಯ ಸಮ್ಮತವಾಗಿದೆ.ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಶನಿವಾರ ಬೈಂದೂರು ರೈತ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ರೈತರ ಅನಿಧಿ೯ಷ್ಟಾವಧಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ ಸಂತ್ರಸ್ಥರ ಪರವಾಗಿ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿಯವರ ನೇತ್ರತ್ವದಲ್ಲಿ ಧರಣಿ ನಡೆಯುತ್ತಿದೆ.ಇಂತಹ ಪಕ್ಷಾತೀತ ಹೋರಾಟ ಅತ್ಯಗತ್ಯವಾಗಿದೆ.ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವ ಕುರಿತು ರೈತರ ತಂಡ ಬಂದು ವ್ಯವಸ್ಥಿತ ರೀತಿಯಲ್ಲಿ ಹೋರಾಡುತ್ತಿದ್ದಾರೆ.ರೈತರ ಸ್ವಂತ ಹಣದಿಂದ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.ಬೆಳಗಾಂ ಅಧಿವೇಶನ, ಬೆಂಗಳೂರು ಸೇರಿದಂತೆ ಹಲವು ಕಛೇರಿ ಆಲೆದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಕೂಡ ಬೇಟಿ ಮಾಡಿದ್ದಾರೆ.ರೈತರ ಪರವಾಗಿ ನಾನು ಕಳೆದ ಎರಡು ವರ್ಷದಿಂದ ನಿರಂತರ ಪ್ರಯತ್ನ ನಡೆಸಿ ಹಿಂದಿನ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಇಲ್ಲಿನ ಗ್ರಾಮಗಳಿಗೆ ಬೇಟಿ ನೀಡಿ ವಾಸ್ತವ ವರದಿ ಸಿದ್ದಪಡಿಸಿ ಸರಕಾರಕ್ಕೆ ನೀಡಿದ್ದಾರೆ. ಸರಕಾರದ ಮುಖ್ಯ ಕಾರ್ಯದರ್ಶಿ ಇದನ್ನು ತಿರಸ್ಕರಿಸಿರುವುದು ಈ ತೊಂದರೆಗೆ ಕಾರಣವಾಗಿದೆ.ಈ ಕುರಿತಂತೆ ನಗರಾಭಿವೃದ್ದಿ ಸಮಿತಿ ರಹಿಂಖಾನ್, ಮುಖ್ಯ ಕಾರ್ಯದರ್ಶಿ ದೀಪ ಚೋಳನ್ ಬೇಟಿ ಮಾಡಿ ಮಾತನಾಡಿದ್ದೇನೆ.ದಸರಾ ಬಳಿಕ ಸಂಪುಟ ಸಭೆಗೆ ಇದರ ಪ್ರಸ್ತಾಪ ತೆಗೆದುಕೊಂಡು ಹೋಗುವ ಕುರಿತು ಪೂರ್ಣ ಪ್ರಯತ್ನ ಮಾಡುತ್ತೇನೆ.ಹನ್ನೊಂದು ವಾರ್ಡ್ ಅಥವಾ ಕಾನೂನು ಅವಕಾಶವನ್ನು ಅರಿತು ಸ್ಪಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಒಂದೊಮ್ಮೆ ಹಳ್ಳಿಗಳನ್ನು ಪ.ಪಂ ವ್ಯಾಪ್ತಿಯಿಂದ ಕೈಬಿಟ್ಟರೆ ಗ್ರಾಮೀಣ ಭಾಗಗಳನ್ನು ಸೇರ್ಪಡಿಸಿ ಗ್ರಾಮಗಳಾಗಿ ವಿಂಗಡಿಸಲು ಕಂದಾಯ ಸಚಿವರು ಸಮ್ಮತಿ ಸೂಚಿಸಿದ್ದಾರೆ.ಹೀಗಾಗಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.
ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ಆರನೇ ದಿನ ಗಂಗನಾಡು ಭಾಗದ ರೈತರು ಪ್ರತಿಭಟನೆ ಜವಬ್ದಾರಿ ವಹಿಸಿದ್ದರು.
ಪ್ರದೀಪ ಕುಮಾರ್ ಶೆಟ್ಟಿ ವಂಡ್ಸೆ, ಗಿರೀಶ್ ಬೈಂದೂರು,ಜಗದೀಶ ದೇವಾಡಿಗ ಮೊದಲಾದವರು ಹಾಜರಿದ್ದರು. ಗಣೇಶ ಪೂಜಾ






ರಿ ಸ್ವಾಗತಿಸಿದರು.ಅರುಣ್ ಕುಮಾರ್ ಶಿರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ವೀರಭದ್ರ ಗಾಣಿಗ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು