ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪ ನಾವುಂದದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಜಗದೀಶ ಪೂಜಾರಿ ಮಾತನಾಡಿ ಸಂಸ್ಥೆಯು ಉತ್ತಮ ಆರ್ಥಿಕ ಸಾಧನೆ ಮೂಲಕ ಪ್ರಗತಿಯ ಪಥದಲ್ಲಿದ್ದು ಕೃಷಿ,ಹೈನುಗಾರಿಕೆ ಸದಸ್ಯರ ಸ್ವಾವಲಂಬನೆಯ ಬದುಕಿಗೆ ಆರ್ಥಿಕ ಶಕ್ತಿ ನೀಡುವ ಜೊತೆಗೆ ಶಿಕ್ಷಣ,ಆರೋಗ್ಯ ಕ್ಷೇತ್ರ ಸೇವೆ ಮಾಹಿತಿ ಕಾರ್ಯಕ್ರಮಗಳನ್ನು ನಿರಂತರ ಆಯೋಜಿಸುತ್ತಿದೆ.ಸಂಘವು ಪ್ರಸಕ್ತ ಸಾಲಿನಲ್ಲಿ 437 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, ರೂ.1.11 ಕೋಟಿ ಲಾಭ ಗಳಿಸಿದೆ.ಸಂಘದ ಸದಸ್ಯರಿಗೆ ಶೇ. 13% ಡಿವಿಡೆಂಡ್ ಘೋಷಿಸಿದೆ.ಸಂಘದ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಸದಸ್ಯರ ಸಹಕಾರದಿಂದ ಸಂಸ್ಥೆಯು ಉತ್ತಮ ಪ್ರಗತಿ ಸಾಧಿಸಿದೆ ಎಂದರು.
ಉಪಾಧ್ಯಕ್ಷ ಸತೀಶ ಕುಮಾರ್ ಶೆಟ್ಟಿ,ನಿರ್ದೇಶಕರಾದ ನರಸಿಂಹ ದೇವಾಡಿಗ,ಗಣೇಶ ಪೂಜಾರಿ,ಶ್ರೀನಿವಾಸ ಪೂಜಾರಿ,ಹರಿಶ್ಚಂದ್ರ ಆಚಾರ್ಯ,ಪ್ರಭಾಕರ ಎಂ.ಖಾರ್ವಿ,ಗಣೇಶ ಕೆ.ಪೂಜಾರಿ,ವೀರೇಂದ್ರ ಹೆಗ್ಡೆ,ರಾಮ ಕಂತಿಹೊಂಡ,ಸುರೇಶ ನಾಯ್ಕ,ಲಕ್ಷ್ಮೀ,ಶಕುಂತಳಾ,ಎಂ.ಅಣ್ಣಪ್ಪ ಬಿಲ್ಲವ,ಶಿವರಾಮ್ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿ.ಎ ಪರೀಕ್ಷೆಯಲ್ಲಿ ಸಾಧನೆಗೈದ ಕೀರ್ತನ್ ಶೆಟ್ಟಿ, ಪ್ರಗತಿಪರ ಕೃಷಿಕ ಅಶೋಕ ಶೆಟ್ಟಿ, ನಿವೃತ್ತ ಶಾಖಾ ಪ್ರಬಂಧಕ ಸೋಮಯ್ಯ ಬಿಲ್ಲವ ರವರನ್ನು ಸಮ್ಮಾನಿಸಲಾಯಿತು.ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.



ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ಸಂಘದ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.ಶಿಕ್ಷಕ ಶಶಿಧರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.