ಶಿರೂರು: ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇಲ್ಲಿನ ಶಿಕ್ಷಕರಾಗಿರುವ ಸಿ.ಎನ್.ಬಿಲ್ಲವ ಶಿರೂರು ಇವರಿಗೆ 2025ನೇ ಸಾಲಿನ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ಒಟ್ಟು 20 ಶಿಕ್ಷಕರಿಗೆ ಪ್ರಶಸ್ತಿಯನ್ನು ನೀಡುತ್ತಿದ್ದು ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಿಕ್ಷಕರಾಗಿದ್ದರು.ಪ್ರತಿಭಾವಂತ ಶಿಕ್ಷಕರಾದ ಇವರು ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳು: 60ಕ್ಕೂ ಹೆಚ್ಚು ಇಲಾಖಾ ತರಬೇತಿ ಪಡೆದಿದ್ದು ಜಿಲ್ಲಾ, ರಾಜ್ಯ ಮಟ್ಟದ ತರಬೇತಿಯ ಜೊತೆಗೆ ಸ್ಕೌಟ್, ಮಾಹಿತಿ ಸಿಂಧು, ಯೋಗ ಮುಂತಾದ ತರಬೇತಿಯನ್ನು ಪಡೆದಿದ್ದಾರೆ. ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲೆ, ಕ್ಲೇ ಆರ್ಟ್ಸ್, ಕ್ರಾಫ್ಟ್, ಮರಳು ಶಿಲ್ಪ,,ಕಲಿಕಾ ಮಾದರಿ ತಯಾರಿ, ಕಥೆ, ಕವನ, ನಾಟಕ ರಚನೆ, ಪತ್ರಿಕೆ ಸಂಪಾದಕತ್ವ, ಸಿಮೆಂಟ್ ಕಲಾಕೃತಿ ತಯಾರಿ,ಗಾರ್ಡನ್/ತೋಟಗಾರಿಕೆ ಜೊತೆಗೆ ಯೋಗ, ನಾಟಕ ಮತ್ತು ಯಕ್ಷಗಾನದ ಗೀಳು,ಶಿಕ್ಷಕ ವೃತ್ತಿಯೊಂದಿಗೆ ಬಿಡುವಿನ ಸಮಯದಲ್ಲಿ ಸಂಘ ಪರಿವಾರದೊಂದಿಗೆ ವ್ಯವಹರಿಸುತ್ತಾ ಜೆ.ಸಿ, ಹಳೆ ವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ, ಶಾರದೋತ್ಸವ ಸಮಿತಿ ಮುಂತಾದ ಸಮಿತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ವಿದ್ಯಾರ್ಥಿಗಳ ಸೃಜನ ಶೀಲತೆ ಹಾಗೂ ಕೌಶಲ್ಯಗಳಿಗೆ ನೀರೆರೆದು ಪೋಷಿಸಿದ್ದಾರೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ 3 ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ, ಕ್ಲೇ ಮಾಡಲಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ,ನನ್ನ ಶಾಲಾ ಕೈತೋಟ ಪ್ರಶಸ್ತಿ, ಜಿಲ್ಲಾ ಮಟ್ಟದಲ್ಲಿ ಸತತ 8 ಬಾರಿ ಪ್ರಥಮ ಬಹುಮಾನ ಹಾಗೂ 3 ಬಾರಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದು ಹಾಗೂ 1 ಬಾರಿ ರಾಜ್ಯ ಮಟ್ಟದಲ್ಲಿ ಕಲಿಕಾ ಮಾದರಿ ತಯಾರಿಗೆ ಬಹುಮಾನ ಬಂದಿದ್ದು ಉತ್ತಮ ಜನಗಣತಿ ಕಾರ್ಯಕ್ಕೆ ರಾಷ್ಟ್ರಪತಿ ಬೆಳ್ಳಿ ಪದಕ ಬಂದಿದೆ ಹಾಗೂ 2021ರ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ವರದಿ/ಗಿರಿ ಶಿರೂರು