ಬೈಂದೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಪ್ರತಿ ಸಂದರ್ಭದಲ್ಲೂ ಕೂಡ ಬಹುಸಂಖ್ಯಾತ ಹಿಂದೂಗಳ ಬಾವನೆಗಳಿಗೆ ದಕ್ಕೆ ಬರುವ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.ಕೋಟ್ಯಾಂತರ ಭಕ್ತರು ಆರಾಧಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದಂತಹ ಶ್ರದ್ದಾ ಕೇಂದ್ರಕ್ಕೆ ಅಪಮಾನದ ಷಡ್ಯಂತ್ರದ ಹಿಂದೆಆಡಳಿತ ಸರ್ಕಾರದ ದೌರ್ಬಲ್ಯವಿದೆ.ಗ್ಯಾರಂಟಿ ಯೋಜನೆ ಮೂಲಕ ಅಧಿಕಾರಕ್ಕೆ ಬಂದು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿಲ್ಲ.ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗ ಜಾರಿಗೆ ತಂದಿರುವ ಹಲವು ಮಹತ್ವಕಾಂಕ್ಷೆ ಯೋಜನೆಗಳನ್ನು ನಿಲ್ಲಿಸಲಾಗಿದೆ.ಕಾಂಗ್ರೆಸ್ ಪಕ್ಷದ ಆಡಳಿತ ಅಭಿವೃದ್ದಿ ಶೂನ್ಯವಾಗಿ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹೇಳಿದರು ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ಫಲಾನುಭವಿಗಳಿಗೆ ಪ್ರಧಾನಂತ್ರಿ ವಿಶ್ವಕರ್ಮ ಯೋಜನೆಯ ಕಿಟ್ ವಿತರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕ್ರೀಡೆ, ಸ್ವ-ಉದ್ಯೋಗ,ಸ್ವಾವಲಂಬನೆ ಕುರಿತು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದು ಪಿ.ಎಮ್ ವಿಶ್ವಕರ್ಮ ಯೋಜನೆಯಲ್ಲಿ 1 ಲಕ್ಷ ಬ್ಯಾಂಕ್ ಸಾಲ ಮತ್ತು ಸ್ವ-ಉದ್ಯೋಗಕ್ಕೆ ಅಗತ್ಯ ಸಲಕರಣೆ ನೀಡಿದೆ.ಉಡುಪಿ ಜಿಲ್ಲೆಯ 1700 ಜನ ಸೌಲಭ್ಯ ಪಡೆದು ಟೈಲರಿಂಗ್ ಹಾಗೂ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಪರಿಷ್ಕರಣೆ ಹಂತದಲ್ಲಿದೆ ಮತ್ತು ಅತೀ ಶೀಘ್ರವಾಗಿ ಅರ್ಹರಿಗೆ ಸೌಲಭ್ಯ ದೊರೆಯಲಿದೆ ಎಂದರು.



ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಬೈಂದೂರು ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ,ಮಂಡಲದ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ,ಗೋಪಾಲ ಪೂಜಾರಿ ವಸ್ರೆ, ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಪ್ರಿಯದರ್ಶಿನಿ,ಭಾಗೀರಥಿ ಸುರೇಶ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ವರದಿ/ಗಿರಿ ಶಿರೂರು