ಬೈಂದೂರು: ಕಳೆದ ಆರು ತಿಂಗಳಿಂದ ಕೆಲವು ಇಲಾಖೆಗಳ ಅಧಿಕಾರಿಗಳು ಕಾರಣ ಹೇಳುವುದರಲ್ಲೆ ಕಾಲ ಕಳೆಯುತ್ತಿದ್ದಾರೆ.ಕೇಂದ್ರ ಸರಕಾರದ ಮಹತ್ವಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಗೆ ಅಧಿಕಾರಿಗಳು ಕಳೆದ 4 ವರ್ಷಗಳಿಂದ ಕಥೆ ಹೇಳುತ್ತಿದ್ದಾರೆ.585 ಕೋಟಿ ಅನುದಾನದಲ್ಲಿ 308 ಕೋಟಿ ಹಣ ಪಾವತಿಯಾಗಿದೆ.ಆದರೆ ಯಾವುದೇ ಗ್ರಾಮದಲ್ಲೂ ಕಾಮಗಾರಿ ಪೂರ್ಣಗೊಂಡಿಲ್ಲ. ಪೈಪಿನ ತುದಿ, ನಳ್ಳಿಯ ತುದಿ ನೀರು ತರುವ ಲಕ್ಷಣ ಕಾಣುತ್ತಿಲ್ಲ ಹೀಗಾಗಿ ಗ್ರಾಮ ಪಂಚಾಯತ್‌ಗಳು ಕಾಮಗಾರಿ ಪೂರ್ಣಗೊಂಡಿರುವ ಪತ್ರ ಕೊಡುವ ಸಾಧ್ಯತೆಗಳಿಲ್ಲ. ಅರಣ್ಯ ಇಲಾಖೆ ಸಮಸ್ಯೆಗಳಿಂದ ಹಾಗೂ ಪರಸ್ಪರ ಇಲಾಖೆಗಳ ನಡುವಿನ ಸಂವಹನ ಕೊರತೆಯಿಂದ ಬಹುತೇಕ ಕಾಮಗಾರಿ ವಿಳಂಬವಾಗಿದೆ.ಬರಿ ಕಾರಣ ಹೇಳುವುದರಲ್ಲೆ ಕಾಲ ಕಳೆಯದೆ ಜನರ ಪರ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬೈಂದೂರು -ರಾಣಿಬೆನ್ನೂರು ಹೆದ್ದಾರಿ 766 ಸಿ ಪ್ರಗತಿಯಲ್ಲಿದೆ.394 ಕೋಟಿ ಎರಡನೇ ಹಂತದ ಅನುದಾನ ಬಿಡುಗಡೆಯಾಗಿದೆ. ಕೆಲವು ಇಲಾಖೆಗಳ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಕಾಮಗಾರಿ ಮಂಜೂರು ಮಾಡುವುದು ಸಲ್ಲದು ಎಂದರು.
ನಾಲ್ಕು ಅಂಡರ್ ಪಾಸ್: ರಾಷ್ಟ್ರೀಯ ಹೆದ್ದಾರಿ 66 ಬಹುತೇಕ ಕಡೆಗಳಲ್ಲಿ ಹೊಂಡಳಾಗಿವೆ.ಬೀದಿ ದೀಪ ಸರಿಯಾಗಿ ಉರಿಯುತ್ತಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.ಹೀಗಾಗಿ ಹೆದ್ದಾರಿ ಕಾಮಗಾರಿ ನಿರ್ವಹಣೆ ಐ.ಆರ್.ಬಿ ಕಂಪೆನಿ ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.177 ಕೋಟಿ ಅನುದಾನದಲ್ಲಿ ಬೈಂದೂರು -ತಲ್ಲೂರು ಸೇರಿದಂತೆ ನಾಲ್ಕು ಅಂಡರ್ ಪಾಸ್ ಮಂಜೂರಾಗಿದ್ದು ಶೀಘ್ರ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಪ್ರವಾಸೋಧ್ಯಮ, ಮೆಸ್ಕಾಂ ಸೇರಿದಂತೆ ಪ್ರಮುಖ ಇಲಾಖೆಗಳು ಅಧಿಕಾರಿಗಳಿಗೆ ಯೋಜನೆಗಳನ್ನು ಸಮರ್ಪಕ ಜನರಿಗೆ ತಲುಪುವಂತೆ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಗುರುರಾಜ ಗಂಟಿಹೊಳೆ, ಜಿಲ್ಲಾಽಕಾರಿ ಸ್ವರೂಪಾ ಕೆ.ಟಿ., ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಡಿಎಫ್‌ಓ ಗಣಪತಿ ನಾಯ್ಕ್, ಶಿವರಾಮ್,ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ, ದಿಶಾ ಸಮಿತಿ ಸದಸ್ಯರಾದ ರಮೇಶ್ ಪೂಜಾರಿ, ಪ್ರಿಯದರ್ಶಿನಿ ಬೆಸ್ಕೂರು ಹಾಜರಿದ್ದರು.
ವರದಿ/ಗಿರಿ ಶಿರೂರು