ಬೈಂದೂರು: ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿ. ಬೈಂದೂರು ಇದರ 8ನೇ ವಾರ್ಷಿಕ ಸಾಮಾನ್ಯ ಸಭೆ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ಕೆ.ವೆಂಕಟೇಶ್ ಕಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯು ವರದಿ ವರ್ಷದಲ್ಲಿ 134 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು 41.96 ಲಕ್ಷ ಲಾಭ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.13% ಡಿವಿಡೆಂಡ್ ಘೋಷಿಸಲಾಯಿತು ಹಾಗೂ ಸಂಸ್ಥೆಯ ಮುಂದಿನ ಕ್ರಿಯಾ ಯೋಜನೆಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಸೌಹಾರ್ದ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಸಾಲ್ಯಾನ್,ಸಂಸ್ಥೆಯ ಉಪಾಧ್ಯಾಕ್ಷ ಯು ಪ್ರಕಾಶ್ ಭಟ್,ನಿರ್ದೇಶಕರುಗಳಾದ ಪ್ರಸಾದ ಪ್ರಭು, ಅರುಣ್ ಕುಮಾರ್ ಶಿರೂರು,ಕೆ.ಗೋಪಾಲಕೃಷ್ಣ, ಭಿಮೇಶ್ ಕುಮಾರ್ ಎಸ್.ಜಿ, ಬಾಲಕೃಷ್ಣ ಪ್ರಭು, ವೈ.ಸಿದ್ದೇಶ್, ಗಣೇಶ ಗಾಣಿಗ,ರಾಜೇಶ್ ಪೈ, ಮೋಹಿನಿ .ಜಿ ಶೆಟ್ಟಿ, ಗೌರಿ ಮಂಗೇಶ್,ಮಮತಾ ಕಿಣಿ ಉಪಸ್ಥಿತರಿದ್ದರು.





ಈ ಸಂಧರ್ಭದಲ್ಲಿ ಸಂಘದ ಎ ವರ್ಗದ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಎಮ್ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ ಪ್ರಭು ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು