ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 27ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಉದ್ಯಮಿ ಗೋವಿಂದರಾಜ್ ಬೆಂಗಳೂರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ ಶಿರೂರಿನಂತಹ ಗ್ರಾಮೀಣ ಭಾಗದಲ್ಲಿ ಯುವಶಕ್ತಿ ಗಣೇಶೋತ್ಸವ ಸಮಿತಿ ಕಳೆದ 27 ವರ್ಷಗಳಿಂದ ಸಂಘಟಿತಗೊಂಡು ಧಾರ್ಮಿಕ,ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದು. ಸಂಘ ಸಂಸ್ಥೆಗಳ ಕ್ರಿಯಾತ್ಮಕ ಚಟುವಟಿಕೆಗಳು ಊರಿನ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.ಗಣೇಶೋತ್ಸವದ ಮೂಲಕ ಸಂಘಟನೆ ಜೊತೆಗೆ ನಿರಂತರ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿರುವುದು ಕರಾವಳಿ ಯುವಶಕ್ತಿಯ ಸಾಧನೆಯಾಗಿದೆ.ಈ ಸಂಘದ ಕಾರ್ಯವೈಖರಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಬಾಸ್ಕರ ಮೊಗೇರ್,ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ ಬಿಲ್ಲವ,ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್,ನಿವೃತ್ತ ಶಿಕ್ಷಕ ಮಾಧವ ಬಿಲ್ಲವ ಕಾಳನಮನೆ,ನಾಯ್ಕನಕಟ್ಟೆ ಶಾಲಾ ಮುಖ್ಯ ಶಿಕ್ಷಕ ಮಹಾದೇವ ಬಿಲ್ಲವ,ಮಾಜಿ ಗೌರವಾಧ್ಯಕ್ಷರಾದ ವಾಸು ಬಿಲ್ಲವ ತೆಂಕಮನೆ,ಅಣ್ಣಪ್ಪ ಮೊಗೇರ್,ಪೂರ್ವಾಧ್ಯಕ್ಷ ರವಿದಾಸ್ ಮೊಗೇರ್,ಹೆರಿಯಣ್ಣ ಮಾಸ್ಟರ್,ನಾಗಪ್ಪ ಬಿಲ್ಲವ ಜಟ್ಟಜ್ಜಿಮನೆ,ನಾಗಪ್ಪ ಬಿಲ್ಲವ ಮಂಗಳುಮನೆ,ಜಲಜಾಕ್ಷಿ ಬೆಂಗಳೂರು,ಆನಂದ ಮೊಗೇರ್ ಹಾಗೂ ಯುವಶಕ್ತಿ ಸರ್ವ ಸದಸ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಚೈತ್ರಾ ದಿನಕರ ಬಿಲ್ಲವ, ವಂದನಾ ಕೃಷ್ಣ ಬಿಲ್ಲವ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಚೇತನ ರಾಮ ಬಿಲ್ಲವ, ದೀಕ್ಷಾ ಆನಂದ ಮೊಗೇರ್ ರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಅನ್ನದಾನದ ಸೇವಾಕರ್ತರಾದ ನಾಗಮ್ಮ ಪೂಜಾರ್ತಿ ಕುಟುಂಬದವರನ್ನು ಯುವಶಕ್ತಿ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು ಹಾಗೂ ಯುವಶಕ್ತಿಗೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಯುವಶಕ್ತಿ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಾಜಿ ಕಾರ್ಯದರ್ಶಿ  ಮಹೇಶ್ ಮೊಗೇರ್ ಸ್ವಾಗತಿಸಿದರು.ಸದಸ್ಯರಾದ ಮಹೇಂದ್ರ ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ನಾಗರಾಜ ಬಿಲ್ಲವ ಚಂಬಿತ್ಲು ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

 

 

 

 

 

 

 

Leave a Reply

Your email address will not be published. Required fields are marked *

thirteen − seven =