ಶಿರೂರು; ಕಳೆದ 32 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ.17 ವರ್ಷಗಳಿಂದ ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕಳೆದ ಒಂದು ವರ್ಷಗಳಿಂದ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮಲ್ಲಿಕಾರ್ಜುನಪ್ಪ ಬಿ.ಎನ್ ರವರ ಬೀಳ್ಕೋಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾಲೇಜು ಹಾಗೂ ಫ್ರೌಢಶಾಲಾ ವತಿಯಿಂದ ಮತ್ತು ಕಾಲೇಜು ಅಭಿವೃದ್ದಿ ಸಮಿತಿ ವತಿಯಿಂದ ರೇಖಾ ಮಲ್ಲಿಕಾರ್ಜುನಪ್ಪ ಬಿ.ಎನ್ ದಂಪತಿಗಳನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಪೈ,ಸದಸ್ಯರಾದ ರವೀಂದ್ರ ಶೆಟ್ಟಿ ಹೊಸ್ಮನೆ,ದಿನೇಶ ಕುಮಾರ್,ರವೀಂದ್ರ ಶೆಟ್ಟಿ ಹೊನ್ಕೇರಿ,ಮೋಹನ ರೇವಣ್ಕರ್, ಕಾಲೇಜಿನ ಉಪಪ್ರಾಂಶುಪಾಲೆ ಜಯಂತಿ ಬಿ.ಶೆಟ್ಟಿ,ನಿವೃತ್ತ ಪ್ರಾಂಶುಪಾಲ ಎಂ.ಪಿ.ನಾಯ್ಕ,ಉಪನ್ಯಾಸಕರಾದ ದೇವೇಂದ್ರ ಕೆ.ಮೊಗೇರ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.


ಉಮಾ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.ಸೌಜನ್ಯ ವಂದಿಸಿದರು.
ವರದಿ/ಗಿರಿ ಶಿರೂರು