ಬೈಂದೂರು: ಬೈಂದೂರಿನ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಯವರ 65ನೇ ಜನ್ಮ ದಿನದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಕೆ.ಬಾಬು ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ,ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ನಾಗರಾಜ ಗಾಣಿಗ,ಸದಾಶಿವ ಡಿ.ಪಡುವರಿ,ಶಿರೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್,ಕಾಂಗ್ರೇಸ್ ಪಕ್ಷದ ಮುಖಂಡರಾದ ಉದಯ ಪೂಜಾರಿ ಮೈದಿನಪುರ,ಪ್ರಸನ್ನ ಕುಮಾರ್ ಶೆಟ್ಟಿ ಕರಾವಳಿ,ಕಾಪ್ಸಿ ನೂರ್‌ಮಹ್ಮದ್,ಚಿಕ್ಕು ಪೂಜಾರಿ,ಹರೀಶ್ ತೋಳಾರ್,ಮಂಜುನಾಥ ಪೂಜಾರಿ,ಪ್ರಕಾಶ ಪೂಜಾರಿ ಉಪ್ಪುಂದ,ವೈದ್ಯರಾದ ಡಾ.ರಾಜೇಶ್, ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಗೋಪಾಲ ಪೂಜಾರಿ ಯವರ ಅಭಿಮಾನಿಗಳು ಹಾಜರಿದ್ದರು.