ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 27ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಆಗಸ್ಟ್ 27 ಹಾಗೂ 28 ರಂದು ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಲಿದೆ.
ಕಾರ್ಯಕ್ರಮಗಳ ವಿವರ: ಸೆ.27 ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ,ಮದ್ಯಾಹ್ನ 12 ಗಂಟೆಗೆ ಸಹಸ್ರನಾಮ ಪೂಜೆ,ಮಹಾಪೂಜೆ,ಮಹಾಮಂಗಳಾರತಿ,ಸಂಜೆ 6 ರಿಂದ ಭಜನಾ ಕಾರ್ಯಕ್ರಮ.ರಾತ್ರಿ ರಂಗಪೂಜೆ,ರಾತ್ರಿ ಪೂಜೆ ನಡೆಯಲಿದೆ.ರಾತ್ರಿ 09 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ,ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ಹಾಗೂ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ.
ಸೆ.28 ರಂದು ಬೆಳಿಗ್ಗೆ 10 ಗಂಟೆಗೆ ಗಣಪತಿಯ ಪ್ರೀತ್ಯರ್ಥವಾಗಿ ವಿಶೇಷ 108 ತೆಂಗಿನಕಾಯಿಯ ಅಷ್ಟೋತ್ತರ ನಾರಿಕೇಳ ಗಣಹೋಮ,ಮದ್ಯಾಹ್ನ ಸರ್ವಪೂಜೆ,ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ವಿಸರ್ಜನಾ ಪೂಜೆ,ಫಲಾವಳಿಗಳ ಏಲಂ ಬಳಿಕ ಆದ್ದೂರಿ ಪುರಮೆರವಣಿಗೆ ಮೂಲಕ ಅರಬ್ಬಿ ಸಮುದ್ರದಲ್ಲಿ ಜಲಸ್ಥಂಭನ ನಡೆಯಲಿದೆ.ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಕರಾವಳಿ ಪ್ರಕಟಣೆಯಲ್ಲಿ ತಿಳಿಸಿದೆ.