ಬೈಂದೂರು; ಬೈಂದೂರು ತಾಲೂಕಿನ ಸೋಮೇಶ್ವರ ಬೀಚ್ ಹೊಸತನದ ಅಳವಡಿಕೆಯಿಂದ ಅತ್ಯಾಧುನಿಕತೆಯ ಟಚ್ ಪಡೆದಿದೆ.ಆಕರ್ಷಕ ವ್ಯವಸ್ಥೆಗಳು ಅಳವಡಿಸಿದರೂ ಕೂಡ ಎರಡು ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆ ಕಾಮಗಾರಿ ಪೂರ್ಣಗೊಳ್ಳದಂತೆ ಮಾಡಿದೆ.
ಎನಿದು ಇಲಾಖೆಯ ವೈಫಲ್ಯ: ಕರಾವಳಿ ಜಿಲ್ಲೆಯ ಅನೇಕ ಗ್ರಾಮೀಣ ಕ್ಷೇತ್ರಗಳು ಪ್ರಾಕೃತಿಕ ಸೌಂದರ್‍ಯ ಹೊಂದಿದ ಪ್ರವಾಸಿ ಸ್ಥಳಗಳನ್ನು ಹೊಂದಿದೆ.ಪ್ರವಾಸೋಧ್ಯಮ ಇಲಾಖೆ ಒಂದಿಷ್ಟು ಪ್ರದೇಶಗಳನ್ನು ಗುರುತಿಸಿದರು ಸಹ ಇತ್ತೀಚಿನ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಿಂದ ಬಹುತೇಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಇವುಗಳಿಗೆ ಹೋಲಿಸಿದರೆ ಬೈಂದೂರಿನ ಸೋಮೇಶ್ವರ ಕಡಲ ತೀರ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಗ್ಗಳಿಕೆ ಹೊಂದಿದೆ.ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿರುವ ಕಾರಣ ಬೀಚ್ ಅಭಿವೃದ್ದಿಗೆ ಬಹಳ ವರ್ಷಗಳಿಂದ ಬೇಡಿಕೆಯಿದ್ದು ಕಳೆದ ಮೂರು ವರ್ಷಗಳಿಂದ ಸಂಸದರ ವಿಶೇಷ ಪ್ರಯತ್ನದ ಫಲವಾಗಿ ಹತ್ತು ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ.ಆದರೆ ಪ್ರವಾಸೋಧ್ಯಮ ಇಲಾಖೆ ನಿರಾಶಕ್ತಿ, ಧಾರ್ಮಿಕ ಧತ್ತಿ ಇಲಾಖೆ ನಿಯಮಗಳ ಸಮನ್ವಯತೆ ಕೊರತೆಯಿಂದ ಸೋಮೇಶ್ವರ ಪ್ರವೇಶಿಸುವ ಪ್ರಧಾನ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಅಧಿಕಾರಿಗಳು ಪರಸ್ಪರ ದೂರಿಕೊಳ್ಳುತ್ತಿದ್ದಾರೆ. ಪ್ರವಾಸೋಧ್ಯಮ ಇಲಾಖೆಯ ಅಭಿವೃದ್ದಿ ನೀಲ ನಕಾಶೆಯಲ್ಲಿ ದೇವಸ್ಥಾನದ ರಸ್ತೆ ಕಾಂಕ್ರೀಟಿಕರಣ ಮಂಜೂರಾಗಿಲ್ಲ.ಸ್ಥಳೀಯರು ಊರಿನ ಪ್ರಮುಖ ದೇವಸ್ಥಾನವಾದ ಕಾರಣ ರಸ್ತೆಯನ್ನು ಕಾಂಕ್ರೀಟಿಕರಣವಾಗಿಸಬೇಕು ಎಂದು ತಡೆದಿದ್ದರು. ದೇವಸ್ಥಾನದ ಕೆರೆಯವರೆಗೆ 60 ಸೆಂಟ್ಸ್ ಜಾಗ ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.ಹೀಗಾಗಿ ಪ್ರವಾಸೋಧ್ಯಮ ಇಲಾಖೆ ಧಾರ್ಮಿಕ ಧತ್ತಿ ಇಲಾಖೆಯ ಅನುಮತಿ ಪಡೆಯಬೇಕಿದೆ.ಒಂದೊಮ್ಮೆ ಅನುಮತಿ ನೀಡಿದರು ಸಹ ರಸ್ತೆ ನಿರ್ಮಿಸಲು ಹೆಚ್ಚುವರಿ ಹಣ ಮಂಜೂರಾಗಿಲ್ಲ.ಹೀಗಾಗಿ ಸರಕಾರಕ್ಕೆ 1.24 ಕೋಟಿ ಕಾಮಗಾರಿ ಪ್ರಸ್ತಾವನೆ ಕಳುಹಿಸಲಾಗಿದೆ.ಇಲಾಖೆಗಳ ಈ ಗೊಂದಲಗಳ ನಡುವೆ ಗುತ್ತಿಗೆದಾರರು ಉತ್ತಮ ಸ್ಥಿತಿಯಲ್ಲಿರುವ ಹಳೆಯ ರಸ್ತೆಯನ್ನು ಅಗೆದು ಹಾಕಿದ್ದಾರೆ.ಕರ್ಕಾಟಕ ಅಮವಾಸ್ಯೆಯ ದಿನದಂದು ಜಾತ್ರೆ ಇರುವ ಕಾರಣ ಸೋಮೇಶ್ವರ ದೇವಸ್ಥಾನದ ವಠಾರ ಸದ್ಯದ ಮಟ್ಟಿಗೆ ಅವ್ಯವಸ್ಥೆಯ ಆಗರವಾಗಿ ಬಿಟ್ಟಿದೆ.ಹೀಗಾಗಿ ಜಿಲ್ಲಾಧಿಕಾರಿಗಳು,ಶಾಸಕರು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.
ಅಭಿವೃದ್ದಿ ಯೋಜನೆಯಲ್ಲಿ ಏನೇನಿದೆ: ಹತ್ತು ಕೋಟಿ ರೂಪಾಯಿ ಅನುದಾನದಲ್ಲಿ 152 ಮೀ ಉದ್ದದ ರಸ್ತೆ ನಿರ್ಮಾಣ,ಸಮುದ್ರಕ್ಕೆ ಇಳಿಯಲು ಮೆಟ್ಟಿಲು, ಹೈಮಾಸ್ಕ್ ದೀಪ, ಸಮುದ್ರ ವೀಕ್ಷಣೆ ಮಾಡಲು ಸುಂದರವಾದ ಬೆಂಚುಗಳು,ಅಲಂಕಾರ ದೀಪ ಮುಂತಾದವುಗಳನ್ನು ಒಳಗೊಂಡಿದೆ.ನದಿ,ಸಾಗರ,ಸಂಗಮದ ಜೊತೆಗೆ ಗುಡ್ಡದ ಮೇಲ್ಗಡೆ ಕ್ಷತಿಜ ನೇಸರಧಾಮ ಹೊಂದಿದೆ.ಕೇಂದ್ರ ಪ್ರವಾಸೋಧ್ಯಮ ಸಚಿವರು ಕೂಡ ಬೇಟಿ ನೀಡಿ ಸೋಮೇಶ್ವರ ಅಭಿವೃದ್ದಿ ಬಗ್ಗೆ ಭರವಸೆ ನೀಡಿದ್ದರು.
ಸೋಮೇಶ್ವರ ಜಾತ್ರೆಗೆ ತಾತ್ಕಾಲಿಕ ರಸ್ತೆ: ಸೋಮೇಶ್ವರ ಅವ್ಯವಸ್ಥೆ ಕುರಿತು ಸ್ಪಂಽಸಿದ ಪ್ರವಾಸೋಧ್ಯಮ ಅಧಿಕಾರಿ ನಿಧಿಶ್ ಹಾಗೂ ಕಾಮಗಾರಿ ಉಸ್ತುವಾರಿ ಅಧಿಕಾರಿ ಮುತ್ತುರಾಜ್ ಮಾತನಾಡಿ ಸೋಮೇಶ್ವರ ಅಭಿವೃದ್ದಿ ಬಹುತೇಕ ಕಾಮಗಾರಿ ಫೂರ್ಣಗೊಂಡಿದೆ.ಸ್ಥಳೀಯರ ಬೇಡಿಕೆಯ ದೇವಸ್ಥಾನದ ಕಾಂಕ್ರೀಟ್ ರಸ್ತೆಗೆ ಅನುದಾನ ದೊರೆಯಬೇಕಿದೆ.ಇಲಾಖೆಗಳ ನಡುವೆ ಸಮನ್ವಯತೆ ಕೊರತೆಯಾಗಿದ್ದು ಸೋಮೇಶ್ವರ ಜಾತ್ರೆ ಪ್ರಯುಕ್ತ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುವುದು ಎಂದಿದ್ದಾರೆ.
ಒಟ್ಟಾರೆಯಾಗಿ ಸರಕಾರದ ಅಭಿವೃದ್ದಿ ಕಾಮಗಾರಿಗಳ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹತ್ತಾರು ವರ್ಷದವರೆಗೆ ಮುಂದುವರಿಯದೆ ಒಂದೆರಡು ವರ್ಷದಲ್ಲಿ ಪೂರ್ಣಗೊಂಡು ಪ್ರದೇಶವು ಅಭಿವೃದ್ದಿಯಾಗುತ್ತದೆ.ಇಲಾಖೆಗೂ ಗೌರವ ಮೂಡುತ್ತದೆ.ಹೀಗಾಗಿ ಸೋಮೇಶ್ವರ ಕಾಮಗಾರಿ ಅತೀ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ..
ವರದಿ/ಚಿತ್ರ; ಶಿರೂರು ಡಾಟ್ ಕಾಮ್…..