ಬೈಂದೂರು; ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ನೇತೃತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಜುಲೈ 24ರ ಸಂಜೆ 06 ಗಂಟೆಗೆ ಆನ್‌ಲೈನ್ ಮೂಲಕ ನಡೆಯಲಿದೆ.ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪ್ರ ಕನ್ನಡ ಅಧ್ಯಯನ ಕ್ಷೇತ್ರ ಪೀಠದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಲಿ, ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಂಗಳಳುರು ವಿಶ್ವವಿದ್ಯಾಲಯ ಕುಲಸಚಿವರಾದ ಕೆಎ ಎಸ್ ರಾಜು ಮೊಗವೀರ, ವಿಜ್ಞಾನಿ. ಮತ್ತು ಉದ್ಯಮಿಗಳಾದ ಡಾ. ಎ.ಎ ಶೆಟ್ಟಿ, ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಯಾದ ರಾಘವೇಂದ್ರ ಕಾಂಚನ್ ಕೋಟ, ಕನ್ನಡ ಚಲನಚಿತ್ರ ಬರಹಗಾರರಾದ ಪ್ರಮೋದ್ ಮರವಂತೆ, ಮಂಗಳೂರು ಭಾರತೀಯ ವೈದ್ಯಕೀಯ ಸಂಘ ಮತ್ತು ವಿಶ್ವಾಸಸ್ಥರು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಾಜಿ ಅಧ್ಯಕ್ಷರಾದ ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು, ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ನರಸಿಂಹ ಭಟ್, ಭಾಗವತರಾದ ರಾಘವೇಂದ್ರ ಆಚಾರ್ಯ, ಬೆಂಗಳೂರು ಟೀಮ್ ಕುಂದಾಪ್ರಿಯನ್ಸ್ ಮುಖ್ಯಸ್ಥರು ಮತ್ತು ’ಯುವ ಪತ್ರಕರ್ತರಾದ ರಂಜಿತ್ ಶಿರಿಯಾರ ಸೇರಿದಂತೆ ವಿವಿಧ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾ ಪೋಷಕರಾದ ವರದರಾಜ್ ಶೆಟ್ಟಿ, ಪೋಷಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷರಾದ ಮಣಿಗಾರ್ ಮೀರನ್ ಸಾಹೇಬ್, ಸ್ಥಾಪಕಾಧ್ಯಕ್ಷರಾದ ಸದಾನ್ ದಾಸ್ (ದುಬೈ), ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ಉಪಾಧ್ಯಕ್ಷರಾದ ದಿನೇಶ್ ದೇವಾಡಿಗ, ಉಪಾಧ್ಯಕ್ಷರಾದ ಸುಜಿತ್ ಶೆಟ್ಟಿ, ಕಾರ್ಯದರ್ಶಿಯಾದ ಸುಧಾಕರ ಪೂಜಾರಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮವನ್ನು ವಿಶ್ವೇಶ್ ಕುಂದಾಪುರ ಅವರು ನಿರೂಪಣೆ ಮಾಡಲಿದ್ದು, ಕುಂದಾಪ್ರ ಡಾಟ್ ಕಾಂ ನ್ಯೂಸ್ ಪೋರ್ಟೆಲ್ ನೇರಪ್ರಸಾರ ಮಾಡಲಿದೆ.