ಬೈಂದೂರು: ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ ಸಂದೇಶ ಕಳುಹಿಸಿ ಸಾವಿರಾರು ರೂ. ವಂಚನೆ ಎಸಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀಣಾ ಎಂಬವರು ಆಸ್ಪತ್ರೆಯಲ್ಲಿರುವಾಗ ಜೂನ್ 16ರಂದು ಮಧ್ಯಾಹ್ನ ಆಸ್ಪತ್ರೆಯ ವೈದ್ಯರ ವಾಟ್ಸಾಪ್‌ನಿಂದ ಅಜೆಂಟಾಗಿ 45,000ರೂ. ಹಣ ಹಾಕುವಂತೆ ಮೆಸೇಜ್ ಬಂದಿದ್ದು ಬ್ಯಾಂಕ್ ಖಾತೆಯಿಂದ 20,000ರೂ. ಹಣವನ್ನು ಗೂಗಲ್ ಪೇ ಮಾಡಿದ್ದರು.ನಂತರ ಇನ್ನೂ 25000ರೂ. ಹಣ ಅಕೌಂಟಗೆ ಹಾಕುವಂತೆ ತಿಳಿಸಿದಾಗ ವೀಣಾ ಅವರಿಗೆ ಅನುಮಾನ ಬಂದು ವೈದ್ಯರಿಗೆ ಕರೆ ಮಾಡಿ ವಿಚಾರಿಸಿದರು. ಆಗ ವೈದ್ಯರ ವಾಟ್ಸಾಪ್ ಅಕೌಂಟ್ ಹ್ಯಾಕ್ ಆಗಿರುವುದಾಗಿ ತಿಳಿಸಿದ್ದು ಅಪರಿಚಿತ ವ್ಯಕ್ತಿ ವೈದ್ಯರ ಹೆಸರಿನಲ್ಲಿ 20,000ರೂ. ಹಣ ಪಡೆದುಕೊಂಡು ವಂಚಿಸಿರುವುದಾಗಿ ದೂರಲಾಗಿದೆ.