ಬೈಂದೂರು: ನಾಡಪ್ರಭು ಕೆಂಪೆಗೌಡರ 516ನೇ ಜನ್ಮ ಜಯಂತಿಯನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರಿನಲ್ಲಿ ಆಚರಿಸಲಾಯಿತು.
ಬೈಂದೂರು ತಹಶೀಲ್ದಾರ ಎಸ್.ರಾಮಚಂದ್ರಪ್ಪ ನಾಡಪ್ರಭು ಕೆಂಪೆಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ನಾಡಪ್ರಭು ಕೆಂಪೆಗೌಡರು ಕನ್ನಡ ನಾಡಿನ ಅಭಿವೃದ್ದಿಯಲ್ಲಿ ನಾಡಪ್ರಭು ಕೆಂಪೆಗೌಡರ ದೂರದೃಷ್ಟಿತ್ವದ ಚಿಂತನೆಗಳು ಸಹಕಾರಿಯಾಗಿದೆ.ಕರ್ನಾಟಕ ಕಂಡ ಧೀಮಂತ ವ್ಯಕ್ತಿತ್ವದ ಕೆಂಪೆಗೌಡರ ಆದರ್ಶಗಳು ನಮಗೆ ದಾರಿದೀಪವಾಗಿದೆ ಎಂದರು.
ಈ ಸಂದರ್ಭದಲ್ಲಿ ಸ.ಪ್ರ.ದಜೇ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ, ಸ.ಪ್ರ.ದರ್ಜೆ ಕಾಲೇಜಿನ ಉಪನ್ಯಾಸಕ ಸತೀಶ್‌ಎ.ಎಂ,ಬೈಂದೂರು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ.ನಾಯ್ಕ,ಕಂದಾಯ ಇಲಾಖೆಯ ಸಿಬಂದಿಗಳು ಹಾಗೂ ಪಟ್ಟಣ ಪಂಚಾಯತ್ ಸಿಬಂದಿಗಳು ಉಪಸ್ಥಿತರಿದ್ದರು.
ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಸ್ವಾಗತಿಸದರು.ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು.ಪ್ರೌಢಶಾಲಾ ಶಿಕ್ಷಕಿ ಸಂದ್ಯಾ ಭಟ್ ವಂದಿಸಿದರು.