ಶಿರೂರು: ಶಿರೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಕಸ ಎಸೆಯುತ್ತಿರುವ ವ್ಯಕ್ತಿಗೆ ಸ್ಥಳದಲ್ಲೆ ದಂಡ ವಸೂಲಿ ಮಾಡಿ ಸೂಕ್ತ ಎಚ್ಚರಿಕೆ ನೀಡಲಾಯಿತು.ಇಲ್ಲಿನ ಅಳ್ವೆಗದ್ದೆ ಕ್ರಾಸ್ ಬಳಿ ಮನೆಯಿಂದ ಕಸವನ್ನು ತಂದು ಹೆದ್ದಾರಿ ಪಕ್ಕಕ್ಕೆ ಚರಂಡಿಯಲ್ಲಿ ಎಸೆಯುತ್ತಿರುವುದನ್ನು ಗುರುತಿಸಿದ ಬೈಂದೂರು ಆರಕ್ಷಕ ಸಿಬ್ಬಂದಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದರು.ಸ್ಥಳಕ್ಕಾಗಮಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿಗಳು 2 ಸಾವಿರ ರೂಪಾಯಿ ದಂಡ ವಿಧಿಸಿ ಮುಂದೆ ಈ ರೀತಿ ಕಸ ಎಸೆಯದಂತೆ ಎಚ್ಚರಿಕೆ ನೀಡಿದರು.ಶಿರೂರಿನ ಬಹುತೇಕ ರಸ್ತೆ ಇಕ್ಕೆಲಗಳಲ್ಲಿ ಕಸ ಎಸೆಯುತ್ತಿದ್ದರು.ಕೆಸರಕೋಡಿ ಬಳಿ ಕಸ ಎಸೆಯುವವರನ್ನು ಗುರುತಿಸಲು ಅಳವಡಿಸಲಾದ ಸಿ.ಸಿ ಕ್ಯಾಮರಾಗಳನ್ನು ಹೊತ್ತೊಯ್ಯಲಾಗಿದೆ.