ಶಿರೂರು; ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಹಾನಿ ಉಂಟಾದ ಶಿರೂರು ಕಳುಹಿತ್ಲು ಭಾಗಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಂಗಳವಾರ ಬೇಟಿ ನೀಡಿದರು.ಈ ಸಂಧರ್ಭದಲ್ಲಿ ತಹಶೀಲ್ದಾರರಿಗೆ ಕರೆ ಮಾಡಿ ಮಾತನಾಡಿ ಈ ಭಾಗದಲ್ಲಿ ಉಂಟಾದ ನಷ್ಟದ ಕುರಿತು ಸಮಗ್ರ ವರದಿಯನ್ನು ಸಿದ್ದಪಡಿಸಿ ಸರಕಾರಕ್ಕೆ ಕಳುಹಿಸಲು ತಿಳಿಸಿದ್ದು ಹಾನಿ ಉಂಟಾದ ಸಂತ್ರಸ್ಥರಿಗೆ ಸರಕಾರದಿಂದ ಇರುವ ಅವಕಾಶದಲ್ಲಿ ಸಹಕಾರ ಒದಗಿಸುವ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನೂರ್ ಮಹ್ಮದ್ ,ಪಕ್ಷದ ವಿವಿದ ಘಟಕದ ಪದಾಧಿಕಾರಿಗಳು ಹಾಗೂ ಗ್ರಾ. ಪಂ ಸದಸ್ಯರು ಹಾಜರಿದ್ದರು.