ಬೈಂದೂರು; ಗುರುರಾಯರು ಕಲಿಯುಗದ ಆರಾಧ್ಯ ಶಕ್ತಿ.ಮದ್ವಾಚಾರ್ಯರು ತೋರಿದ ಮಾರ್ಗದ ಮೂಲಕ ಭಗವಂತನ ಸಾಕ್ಷತ್ಕಾರ ಕಂಡಿದ್ದಾರೆ.ಭಕ್ತಿಯ ಮೂಲಕ ಭಗವಂತನ ಸಾಕ್ಷತ್ಕಾರವನ್ನು ಜಗತ್ತಿಗೆ ಶ್ರೀಗಳು ಸಾರಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಅವರು ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನಣೆ ಬೈಂದೂರು ಇದರ ಶ್ರೀ ಗುರು ಸಾರ್ವಭೌಮರ ವೃಂದಾವನ ಪುನಃ ಪ್ರತಿಷ್ಠೆ, ಶ್ರೀ ಆಂಜನೇಯ, ನವಗ್ರಹ ಕಲಶಾಭಿಷೇಕ, ಶತಕಲಶಸಹಿತ ಬ್ರಹ್ಮಕಲಶೋತ್ಸವ, ಕಾರ್ಯಕ್ರಮದಲ್ಲಿ ವೃಂದಾವನ ಪ್ರತಿಷ್ಠೆ ನೆರವೇರಿಸಿ ಆಶೀರ್ವಚನ ನೀಡಿ ನಮ್ಮ ಮುಂದಿನ ಜನಾಂಗಕ್ಕೆ ಸಂಸ್ಕೃತಿಯ ಪರಿಚಯವನ್ನು ಮಾಡಿ ಕೊಡುವಂತಹ ಶೃದ್ಧಾ ಕೇಂದ್ರಗಳಾದ ಮಠ, ಮಂದಿರಗಳ ಮೂಲಕ ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಸನಾತನ ಸಂಸ್ಕೃತಿ ಉಳಿಸಿ ಬೆಳೆಸಿಕೊಳ್ಳಬೇಕು ಎಂದರು.
ರಾಘವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪುತ್ತಿಗೆ ಮಠದ ಸಂಸ್ಥಾನ ವಿದ್ವಾಂಸ ಕುತ್ಯಾರು ಕೇಂಜಿ ಶ್ರೀಧರ ತಂತ್ರಿ, ಶ್ರೀ ಸೇನೇಶ್ವರ ದೇವಸ್ಥಾನದ ಅರ್ಚಕರ ಯು. ಮಂಜುನಾಥ ಮಯ್ಯ, ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನಾವಡ, ಕ್ಷೇತ್ರದ ಅರ್ಚಕ ಸುಬ್ರಾಯ ನಾವಡ,ರಾಘವೇಂದ್ರ ಸ್ವಾಮಿ ಟ್ರಸ್ಟ್ ಪದಾಽಕಾರಿಗಳು ಉಪಸ್ಥಿತರಿದ್ದರು.
ರಾಘವೇಂದ್ರ ಸ್ವಾಮಿ ಟ್ರಸ್ಟ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ. ಕಾರ್ಯಕ್ರಮ ನಿರ್ವಹಿಸಿದರು.ಪ್ರದೀಪ್ ಶೆಟ್ಟಿ ವಂದಿಸಿದರು.