ಬೈಂದೂರು: ಕಷ್ಟದಿಂದ ಬಿಡುಗಡೆಯಾಗಬೇಕಾದರೆ ಗುರುವಿನ ಅನುಗ್ರಹ ದೊರೆಯಬೇಕು.ಗುರುರಾಯರು ಕಲಿಯುಗದ ಕಾಮಧೇನು.ಜೀವನದ ದು:ಖ ಮುಕ್ತಿಯಾಗಬೇಕಾದರೆ ಭಗವಂತನ ಅನುಗ್ರಹ ಅಗತ್ಯ.ಭಕ್ತಿಯ ಸೇವೆಗೆ ಗುರುವಿನ ಅನುಗ್ರಹ ದೊರೆಯುತ್ತದೆ ಎಂದು ಮಂಗಳೂರು ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀ ಪಾದರು ಹೇಳಿದರು ಅವರು ಗುರುವಾರ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನಣೆ ಬೈಂದೂರು ಇದರ ಶ್ರೀ ಗುರು ಸಾರ್ವಭೌಮರ ವೃಂದಾವನ ಪುನಃ ಪ್ರತಿಷ್ಠೆ, ಶ್ರೀ ಆಂಜನೇಯ, ನವಗ್ರಹ ಕಲಶಾಭಿಷೇಕ, ಶತಕಲಶಸಹಿತ ಬ್ರಹ್ಮಕಲಶೋತ್ಸವ ಹಾಗೂ ವೃಂದಾವನ ಪ್ರತಿಷ್ಠೆಯ ಐದನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇಗುಲಕ್ಕೆ ಹರಿದು ಬಂದ ಜನಸಾಗರ, ಎಂಟು ಸಾವಿರಕ್ಕೂ ಅಧಿಕ ಭಕ್ತರು; ಗುರುವಾರ ವತ್ತಿನೆಣೆ ಕಿರು ಮಂತ್ರಾಲಯಲ್ಲಿ ಜನಸ್ತೋಮ ಸೇರಿತ್ತು.ಉಡುಪಿ,ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಭಕ್ತರು ಗುರುವಾರ ದೇಗುಲಕ್ಕೆ ಜಮಾಯಿಸಿದದ್ದರು.ಸುಮಾರು ಎಂಟು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದು ಮಳೆಯ ನಡುವೆಯು ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾಘವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪುತ್ತಿಗೆ ಮಠದ ಸಂಸ್ಥಾನ ವಿದ್ವಾಂಸ ಕುತ್ಯಾರು ಕೇಂಜಿ ಶ್ರೀಧರ ತಂತ್ರಿ, ಕ್ಷೇತ್ರದ ಅರ್ಚಕ ಸುಬ್ರಾಯ ನಾವಡ,ಅರ್ಚಕರಾದ ಮುರಳಿ ನಾವಡ ಹಾಗೂ ರಾಘವೇಂದ್ರ ಸ್ವಾಮಿ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಎಸ್.ರಾಜು ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಟ್ರಸ್ಟ್‌ನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಪ್ರಭಾಕರ ಬಿಲ್ಲವ ವಂದಿಸಿದರು.
ವರದಿ/ಗಿರಿ ಶಿರೂರು