ಬೈಂದೂರು: ಮೇ.25 ರಿಂದ 29 ರ ವರೆಗೆ ವತ್ತಿನೆಣೆ ಕಿರು ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯುವ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮೂಹೂರ್ತ ನಡೆಯಿತು ಹಾಗೂ ನಾಗದೇವರ ಪುನಃ ಪ್ರತಿಷ್ಠಾಪನೆಗೆ ಶಿಲನ್ಯಾಸ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಾಯ ನಾವಡ ಹಾಗೂ ಮುರಳಿ ನಾವಡ ಇವರ ನೇತ್ರತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ, ಮಂಜುನಾಥ ಶೆಟ್ಟಿ,ರವೀಂದ್ರ ಶ್ಯಾನುಭಾಗ್,ರಾಜು ಶೆಟ್ಟಿ ಸೂರ್ಕುಂದ,ರಾಜು ದೇವಾಡಿಗ,ಅಣ್ಣಪ್ಪ ಪೂಜಾರಿ,ಗಿರೀಶ್ ಶೇಟ್,ದಿನೇಶ ಕೆ,ಸಮಿತಿಯ ಸರ್ವ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.