ಬೈಂದೂರು: ಶ್ರೀ ರಾಹುತೇಶ್ವರ ಸನ್ನಿಧಾನ ಮತ್ತು ಶ್ರೀ ರಾಮ ಭಜನಾ ಮಂಡಳಿ ರಾಹುತನಕಟ್ಟೆ ಬಂದೂರು ಇದರ ಶ್ರೀ ರಾಹುತೇಶ್ವರನ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,ನೂತನ ಭಜನಾ ಮಂದಿರದ ಉದ್ಘಾಟನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಮೇ.15 ರಿಂದ 18 ರ ವರೆಗೆ ನಡೆಯಲಿದೆ.
ಮೇ,15 ರಿಂದ ಶ್ರೀ ರಾಹುತೇಶ್ವರ ಪರಿವಾರ ಸಾನಿಧ್ಯದಲ್ಲಿ ವಿವಿಧ ಪೂಜಾ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.
ಮೇ.16 ರಂದು ಬೆಳಿಗ್ಗೆ ಗುರುಗಣಪತಿ ಪ್ರಾರ್ಥನೆ,ನಾಂದಿ,ಪುಣ್ಯ, ವಾಚನ ವಿವಿಧ ವಿಧಿ ವಿಧಾನಗಳು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕೇಮಾರು ಸಾಂಽಪನಿ ಸಾಧನಶ್ರಾಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಧಾರ್ಮಿಕ ಆಶೀರ್ವಚನಗೈಯಲಿದ್ದಾರೆ.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಚಂದ್ರಶೇಖರ ಮೊಗವೀರ ಅಧ್ಯಕ್ಷತೆ ವಹಿಸಲಿದ್ದು ಮುಂತಾದ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.