ಉಪ್ಪುಂದ; ಬಿಜೂರು ಮೂರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನ ಇದರ ವಾರ್ಷಿಕ ಉತ್ಸವ, ಅಖಂಡ ಏಕಾಹ ಭಜನೆ ಹಾಗೂ ಗೆಂಡ ಸೇವೆ ಕಾರ್ಯಕ್ರಮ ಎ.14 ರಿಂದ 16ರ ವರೆಗೆ ನಡೆಯಲಿದೆ.
ಎ.14ರಂದು ಶ್ರೀ ನಂದಿಕೇಶ್ವರ ಮತ್ತು ಸಪರಿವಾರ ದೈವಗಳ ಹಾಗೂ ಶ್ರೀ ನಾಗ ದೇವರ ವಾರ್ಷಿಕ ಮಹೋತ್ಸವ ವೇದಮೂರ್ತಿ ಮಹಾಬಲ ಭಟ್ ನೇತ್ರತದಲ್ಲಿ ಬೆಳಗ್ಗೆ ಕಲಾತತ್ವ ಹೋಮ, ಅಷ್ಠೋತ್ತರ ಶತಕಲಶ ಸ್ಥಾಪನೆ, ರುದ್ರಹೋಮ, ನಾಗದೇವರಿಗೆ ಅಧಿವಾಸಹೋಮ ಹಾಗೂ ಅಷ್ಠವಿಶಂತಿ ಕಲಶ ಸ್ಥಾಪನೆ, ನಾಗಗಾಯತ್ರಿ ಹೋಮ ಹಾಗೂ ಕಲಾಶಾಭಿಷೇಕ ಮಧ್ಯಾಹ್ನ ಗಂಟೆ 12ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6ಕ್ಕೆ ಶ್ರೀ ನಂದಿಕೇಶ್ವರ ಸಪರಿವಾರ ದೈವಗಳಿಗೆ ಕಲಾಭಿವೃದ್ಧಿ ಹೋಮ, ಆಶ್ಲೇಷ ಬಲಿ, ಆಷ್ಠಾವಧಾನ ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಎ.15ರಂದು ಬೆಳಗ್ಗೆ 10 ಕ್ಕೆ ಪ್ರದೀಪ ಸ್ಥಾಪನೆಯೊಂದಿಗೆ ಏಕಾಹ ಅಖಂಡ ಭಜನೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಮಧ್ಯಾಹ್ನ ಗಂಟೆ 12ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಗಂಟೆ 6 ಕ್ಕೆ ವಿವಿಧ ಭಜನಾ ತಂಡಗಳಿಂದ ನಗರ ಭಜನೆ ಹಾಗೂ ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಎ.16ರಂದು ಬೆಳಗ್ಗೆ 10.30ಕ್ಕೆ ಮಂಗಲೋತ್ಸವ, ತುಲಭಾರ ಹಾಗೂ ತೊಟ್ಟಿಲು ಸೇವೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಗಂಟೆ 5ಕ್ಕೆ ಗೆಂಡ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು ರಾತ್ರಿ ಗಂಟೆ 8 ಕ್ಕೆ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಬಯಲಾಟ ನಡೆಯಲಿದೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮೂರು ದಿನ ಮಧ್ಯಾಹ್ನ-ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.