ಶಿರೂರು: :ಕರ್ಣಾಟಕ ಬ್ಯಾಂಕ್ ಶಿರೂರು ಶಾಖೆ ಇದರ 13ನೇ ವಾರ್ಷಿಕೋತ್ಸವ ಸಮಾರಂಭ ಕರ್ಣಾಟಕ ಬ್ಯಾಂಕ್ ಶಿರೂರು ಶಾಖೆಯಲ್ಲಿ ನಡೆಯಿತು. ಕರ್ಣಾಟಕ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ವಿಷ್ಣುಮೂರ್ತಿ ಉಪಾಧ್ಯಾಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲೆಯ ಅಭಿವೃದ್ದಿ ಕ್ಷೇತ್ರದಲ್ಲಿ ಅತ್ಯುತ್ತಮ ವಿಸ್ತಾರವಾಗಿರುವ ಗ್ರಾಮ ಶಿರೂರು ಉತ್ತಮ ಆರ್ಥಿಕ ವ್ಯವಹಾರ ಸಾಧಿಸಿರುವುದು ಈ ಊರಿನ ಹೆಗ್ಗಳಿಕೆಯಾಗಿದೆ.ಕರ್ಣಾಟಕ ಬ್ಯಾಂಕ್ ಅತ್ಯುತ್ತಮ ಸೇವೆ ನೀಡುವ ಜೊತೆಗೆ ಶಿರೂರು ಶಾಖೆಯಲ್ಲಿ ನೂರು ಕೋಟಿಗೂ ಅಧಿಕ ವ್ಯವಹಾರ ನಡೆಸಿದೆ.ಗ್ರಾಹಕರು ಮತ್ತು ಸಾರ್ವಜನಿಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಟ್ಟಡದ ಮಾಲಕರಾದ ಉದಯ ಕಾಮತ್,ಉದ್ಯಮಿ ಎಸ್.ಪ್ರಕಾಶ ಪ್ರಭು,ಸೌಮ್ಯ ಟೂರ್‍ಸ್ ಆಂಡ್ ಟ್ರಾವೆಲ್ಸ್ ಮಾಲಕರಾದ ಮೋಹನ ಕೆ.ಪೂಜಾರಿ, ಕರ್ಣಾಟಕ ಬ್ಯಾಂಕ್ ನಾಗೂರು ಶಾಖೆಯ ವ್ಯವಸ್ಥಾಪಕ ಪರಮೇಶ್ವರ ಪೂಜಾರಿ ಉಪಸ್ಥಿತರಿದ್ದರು.





ಕರ್ಣಾಟಕ ಬ್ಯಾಂಕ್ ಶಿರೂರು ಶಾಖೆಯ ವ್ಯವಸ್ಥಾಪಕ ರಾಥೇಶ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಂಸ್ಥೆಯ ಸಿಬಂದಿ ಆದಿತ್ಯ ಸ್ವಾಗತಿಸಿದರು. ಕರ್ಣಾಟಕ ಬ್ಯಾಂಕ್ ಶಿರೂರು ಶಾಖೆಯ ಸಹಾಯಕ ವ್ಯವಸ್ಥಾಪಕಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
News/pic Giri Shiruru