ಶಿರೂರು: ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು ಶಿರೂರು ಇದರ 10ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ ಮಾ.28 ಹಾಗೂ 29 ರಂದು ನಡೆಯಲಿದೆ.
ಮಾ.28 ರಂದು ಬೆಳಿಗ್ಗೆ ಗುರು ಗಣೇಶ ಪೂಜೆ,ಪುಣ್ಯಾಹ,ದೇವನಾಂಽ ಕಲಶ ಸ್ಥಾಪನೆ ಹೋಮ ಹವನ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.
ಮಾ.29 ರಂದು ಬೆಳಿಗ್ಗೆ ಗುರು ಗಣೇಶ ಪೂಜೆ,ಪುಣ್ಯಾಹ,ಕಲಶ ಸ್ಥಾಪನೆ,ದೇವರಿಗೆ ತತ್ವ ಶಕ್ತಿ ಕಲಾವೃದ್ದಿ ಹೋಮ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆಯಲ್ಲಿ ತಿಳಿಸಲಾಗಿದೆ.