ಬೈಂದೂರು;  ಭಗವಂತನ ಅನುಗ್ರಹ ಪಡೆದುಕೊಳ್ಳಲು ಭಜನೆ, ಸಂಕೀರ್ತನೆ, ಜಪ, ಪೂಜೆ, ಯಾಗ, ಹವನ, ಧ್ಯಾನ, ಹರಕೆ, ಸೇವೆ ಸೇರಿದಂತೆ ಅನೇಕ ವಿಧಗಳಲ್ಲಿ ಭಕ್ತರು ಮೊರೆ ಹೋಗುತ್ತಾರೆ ಎಂದು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ತಂತ್ರಿ, ವ್ಯವಸ್ಥಾಪನಾ ಸಮಿತಿ ಸದಸ್ಯ ನಿತ್ಯಾನಂದ ಅಡಿಗ ಹೇಳಿದರು ಅವರು ಮರಾಠಿ ಸಮುದಾಯದವರು ಆಚರಿಸುವ ಹೋಳಿ ನಾಯಕ್ ಪ್ರತಿವರ್ಷ ಆಚರಿಸುವ ಹೋಳಿ ಆಚರಣೆ ಪೂರ್ವಭಾವಿಯಾಗಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ಕಾಣಿಕೆ ಸಲ್ಲಿಸುವ ವಾಡಿಕೆಯಂತೆ ರವಿವಾರ ಬೈಂದೂರು, ಕುಂದಾಪುರ ವಲಯದ ಮರಾಠಿ ಸಂಘಗಳ ನೇತೃತ್ವದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಕುಣಿತ ಸಲ್ಲಿಸಿ, ಕಾಣಿಕೆ ಸರ್‍ಪಿಸಿ ಬಳಿಕ ಸ್ವರ್ಣಮುಖಿ ಮಂಟಪದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ ಮರಾಠಿ ಮಾತನಾಡುವ ಈ ಭಾಗದ ನಾಯಕ್ ಸಮುದಾಯದವರು ದೇವರ ಮೇಲಿರುವ ಶ್ರದ್ಧಾ-ಭಕ್ತಿಯನ್ನು ಹಾಡು, ಕುಣಿತದ ಮೂಲಕ ಸಲ್ಲಿಸುವ ಸಂಪ್ರದಾಯ ಹೋಳಿ ಆಚರಣೆ. ಇದನ್ನು ಉಳಿಸಿ ಬೆಳೆಸುವ ಹೊಣೆ ಸಮುದಾಯದವರ ಮೇಲಿದೆ ಎಂದರು.

ಈ ಸಂದಭ೯ದಲ್ಲಿ ದೇವಳದ ಅರ್ಚಕ ಎನ್. ನರಸಿಂಹ ಅಡಿಗ,ದೇವಳದ ಅರ್ಚಕ  ಶ್ರೀಧರ ಅಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯಕ್,ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಸುಧಾ ಕೆ,ಮುಖ್ಯ ಕಾರ್ಯನಿರ್ವಹಣಾಽಕಾರಿ ಪ್ರಶಾಂತ್ ಶೆಟ್ಟಿ, ಪ್ರಾಥಮಿಕ  ಶಾಲಾ ಶಿಕ್ಷಕರ ಸಂಘಟನೆಯ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ,ರಾಜೇಶ್ ಕೆ.ಸಿ,

ಪಾರಂಪರಿಕ ಗುಮ್ಮಿ ಮರಾಠಿ ನಾಯಕ್ ಉದ್ಯೋಗಿಗಳ ಸಂಘದ ಅಧ್ಯಕ್ಷ ನಾರಾಯಣ ನಾಯಕ್ ಬ್ರಮ್ಮೇರಿ, ಸಿದ್ದೇಶ್ವರ ಮರಾಠಿ ಕ್ರೆಡಿಟ್ ಕೊ ಆಪರೇಟಿವ್ ಉಪಾಧ್ಯಕ್ಷ ಚಂದ್ರ ನಾಯಕ್ ಹರ್‍ಕೋಡು, ಮುಖ್ಯ ಕಾರ್ಯನಿರ್ವಹಣಾಽಕಾರಿ ಉದಯ್ ನಾಯಕ್ ಕಣ್ಣಿಮಡಿ ಗೋಳಿಹೊಳೆ, ರಾಮ ನಾಯಕ್ ಕೆರೆಕಾಡು ಹಳ್ಳಿಹೊಳೆ, ನಾರಾಯಣ ನಾಯಕ್ ವಾಟಿಬಚ್ಚಲು, ನಾಗಪ್ಪ ಮರಾಠಿ ಹೊಸೂರು ತೂದಳ್ಳಿ,ವಾಸುದೇವ ಮರಾಠಿ ಹೊಸೂರು ಉಪಸ್ಥಿತರಿದ್ದರು.

ಕುಣಿತ ಸೇವೆ: ಬೈಂದೂರು, ಕುಂದಾಪುರ ವಲಯದಿಂದ ವಿವಿಧ ವೇಷಭೂಷಣಗಳೊಂದಿಗೆ ಬಂದಿದ್ದ ಮರಾಠಿ ಹಿರಿಯರು, ಸಮುದಾಯದವರು ಕಿರಿಯರು ಎಂದು ವಯಸ್ಸಿನ ಭೇದವಿಲ್ಲದೆ, ಸಮುದಾಯದ ಹತ್ರಕಟ್ಟೆಯ ಗುರಿಕಾರರು, ಪಡುಗೌಡರ ನೇತೃತ್ವದಲ್ಲಿ ಗುಮ್ಟೆ,  ಮದ್ದಳೆ, ತಾಳಗಳ ಬಡಿತದ ಮೂಲಕ, ಪೌರಾಣಿಕ ಚರಿತ್ರೆಯ ಸಾಲುಗಳನ್ನು ನಮ್ಮ ಸಂಪ್ರದಾಯಗಳ ಮುಂದಿನ ಪೀಳಿಗೆಗೆ ಒದಗಿಸಬೇಕು ಎನ್ನುವುದರ ಜತೆಯಲ್ಲಿ ಸಮುದಾಯದ ಎಲ್ಲಾ ಕೇರಿಯವರನ್ನು ಒಂದೇ ದಿನ ಒಟ್ಟು ಮಾಡಬೇಕು ಎನ್ನು ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು………ಮಹಾಲಿಂಗ ನಾಯಕ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಕೊಲ್ಲೂರು

 

 

Leave a Reply

Your email address will not be published. Required fields are marked *

19 − eight =