ಬೈಂದೂರು: ಹರೇ ರಾಮ್ ಪ್ರೆಂಡ್ಸ್ ದೊಂಬೆ ಇವರ ಆಶ್ರಯದಲ್ಲಿ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ವೇವ್ ರನ್ನರ್ ಟ್ರೋಪಿ -2025 ವಾಜಪೇಯಿ ಸರ್ಕಲ್ ದೊಂಬೆಯಲ್ಲಿ ನಡೆಯಿತು.
ದೊಂಬೆ ನಾಡದೋಣಿ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಶಂಕರ ಖಾರ್ವಿ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಯುವಕರು ಸಂಘಟಿಸಿದ ಈ ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಲಿ.ಈ ಭಾಗದ ಯುವಕರ ಸಂಘಟಿತ ಪ್ರಯತ್ನ ಶ್ಲಾಘನೀಯವಾಗಿದೆ.ಇಂತಹ ಕ್ರೀಡೆಗಳು ಈ ಭಾಗದಲ್ಲಿ ನಿರಂತರವಾಗಿ ನಡೆಯಲಿದ ಎಂದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಸದಸ್ಯ ಸಂಜೀವ ಮೊಗವೀರ,ಪತ್ರಕರ್ತ ಗಿರೀಶ್ ಕರಾವಳಿ,ದೊಂಬೆ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ದಿಲೀಪ್ ಖಾರ್ವಿ,ಹರೇ ಪ್ರೆಂಡ್ಸ್ ಅಧ್ಯಕ್ಷ ದಿಲೀಪ್ ಖಾರ್ವಿ,ನಾಡದೋಣಿ ಸಂಘದ ಕಾರ್ಯದರ್ಶಿ ರುದ್ರ ಖಾರ್ವಿ,ವಿಕ್ರಮ್ ಮೊಗವೀರ,ಕಿರಣ್ ಮೇಸ್ತ,ಸಂಘಟಕರಾದ ಮಹೇಂದ್ರ ಖಾರ್ವಿ,ಅಕ್ಷಯ್ ಖಾರ್ವಿ,ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





ವಾಸು ಖಾರ್ವಿ ದೊಂಬೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.