ಬೈಂದೂರು; ಕುಂಭಮೇಳ ಯಾತ್ರೆಗೆ ತೆರಳಿ ನಾಪತ್ತೆಯಾಗಿದ್ದ ಶಿರೂರಿನ ವ್ಯಕ್ತಿ ಶನಿವಾರ ಮದ್ಯಾಹ್ನ ಊರಿಗೆ ಮರಳಿದ್ದಾನೆ. ಫೆ. 22 ರಂದು ಒಟ್ಟು 30 ಜನರು ಶಿರೂರಿನಿಂದ ಕುಂಭಮೇಳ ಯಾತ್ರೆಗೆ ತೆರಳಿದ್ದರು.ಕುಂಭಮೇಳದ ಪ್ರಯಾಗ್‌ರಾಜ್‌ನಲ್ಲಿ ತಂಡದಲ್ಲಿದ್ದ ಶಿರೂರು ಗ್ರಾಮದ ಅಳ್ವೆಗದ್ದೆ ನಿವಾಸಿ ಶ್ರೀಧರ ಮೊಗೇರ (50) ನಾಪತ್ತೆಯಾಗಿದ್ದರು.ತಂಡದ ಸದಸ್ಯರು ಎರಡು ಮೂರು ದಿನ ಹುಡುಕಿದರು ಸಹ ಪತ್ತೆಯಾಗಿಲ್ಲ.ಪ್ರಯಾಗ್‌ರಾಜ್ ಆರಕ್ಷಕ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು.ಶನಿವಾರ ಮದ್ಯಾಹ್ನ ನಾಪತ್ತೆಯಾದ ವ್ಯಕ್ತಿ ರೈಲಿನಲ್ಲಿ ಊರಿಗೆ ಮರಳಿದ್ದಾರೆ.ನಾಪತ್ತೆಯಾದ ಬಗ್ಗೆ  ಸ್ಪಷ್ಟತೆ ತಿಳಿದಿಲ್ಲ.ಕೈಯಲ್ಲಿದ್ದ ಹಣ ಖಾಲಿಯಾಗಿ ಮೊಬೈಲ್ ಚಾರ್ಜ್ ಇಲ್ಲದ ಕರಣ ಇತರರನ್ನು ಸ್ಪಂಧಿಸಲು ಸಾಧ್ಯವಾಗಿಲ್ಲ .ಬಳಿಕ ರೈಲಿನ ಹಿಂಬದಿ ಬೋಗಿಯಲ್ಲಿ ಕುಳಿತು ಊರಿಗೆ ಪ್ರಯಾಣಿಸಿದ್ದು ಸುರಕ್ಷಕಿತವಾಗಿ ಮನೆಗೆ ಮರಳಿದ್ದಾರೆ.ಇದರಿಂದಾಗಿ ಆತಂಕದಲ್ಲಿರುವ ಮನೆಯವೆರಿಗೆ ಸಂತಸ ತಂದಿದೆ.

 

 

 

 

 

 

Leave a Reply

Your email address will not be published. Required fields are marked *

seven − 4 =