ಬೈಂದೂರು:300 ಟ್ರೀಸ್ ಸಮೃದ್ಧ  ಬೈಂದೂರು ಯೋಜನೆ ಅಡಿಯಲ್ಲಿ  ರೋಬೋಸಾಫ್ಟ್ ಟೆಕ್ನಾಲಜೀಸ್ ಉಡುಪಿ ಇವರ ಸಹಯೋಗದಲ್ಲಿ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಾನಾಡು ಶಾಲೆಗೆ  ಎರಡು ಹೊಸ ಕಟ್ಟಡಗಳ ಗುದ್ದಲಿ ಪೂಜೆ ನಡೆಯಿತು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ರೋಬೋಸಾಫ್ಟ್ ಟೆಕ್ನಾಲಜಿಸ್ ನ ಗುಣಮಟ್ಟ ನಿರ್ವಹಣಾ ವಿಭಾಗದ ಉಪಾಧ್ಯಕ್ಷ ಶ್ರೀಧರನ್ ಕೇಶವನ್, ಜಿ ಎ ಡಿ ಕಾರ್ಯಾಚರಣೆ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಗೋಪಾಲಕೃಷ್ಣ ಕಾಮತ್, ಕಂಪನಿ ಕಾರ್ಯದರ್ಶಿಗಳಾದ  ಚಕ್ರಿ ಹೆಗಡೆ, ದಾನಿಗಳಾದ ಸುಬ್ರಮಣ್ಯ ಕೆ ಬಿ, ಎಸ್ ಡಿ ಎಂ ಸಿ ಅಧ್ಯಕ್ಷ ರಾಜು ಬಿ, ಎಸ್ ಡಿ ಸಿ ಅಧ್ಯಕ್ಷ ರಾಜು ಡಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಭಾಗೀರಥಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಮಾರ್ ಮರಾಠಿ, ಸ್ಥಳದಾನಿಗಳಾದ ಸುಭಾಷ್ ಚಂದ್ರ ಶೇರುಗಾರ್, ಶಿವರಾಮ ಆಚಾರ್, ದೈಹಿಕ ಶಿಕ್ಷಣ ಶಿಕ್ಷಕಿ ಗೌರಿ. ಎಸ್, ವಿಜ್ಞಾನ ಶಿಕ್ಷಕಿ ಶಾರದ ಎಸ್, ಗೌರವ ಶಿಕ್ಷಕಿ ಅಂಬಿಕಾ,ಜ್ಯೋತಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ ಬಿಲ್ಲವ ಸ್ವಾಗತಿಸಿದರು. ಜಿಪಿಟಿ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.ರಾಘವೇಂದ್ರ ಕೆ ಎಸ್ ವಂದಿಸಿದರು.

Leave a Reply

Your email address will not be published. Required fields are marked *

two × 2 =