ಬೈಂದೂರು: ಬೈಂದೂರಿನ ಪ್ರಸಿದ್ದ ಒಣಕೊಡ್ಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಶಿವರಾತ್ರಿ ಸಂಭ್ರಮ ಸಡಗರದಿಂದ ನಡೆಯಿತು.ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಶಿವರಾತ್ರಿ ದಿನದಂದು ಲಿಂಗ ಮುಟ್ಟಿ ಪೂಜಿಸುವುದು ಇಲ್ಲಿನ ವಿಶೇಷತೆಯಾಗಿದೆ.ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಯಡ್ತರೆ ರಾಜಮೋಹನ ಶೆಟ್ಟಿ ಹಾಗೂ ಸಹೋದರರ ಮುಂದಾಳತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಮಹಾಲಿಂಗೇಶ್ವರ ಸಾನಿಧ್ಯ,ಶ್ರೀವೈದ್ಯನಾಥ,ಮೃತ್ಯುಂಜಯ ಎಂಬ ತ್ರಿವಿಧ ಶಿವನ ಶಕ್ತಿಗಳ ಸಾನಿಧ್ಯ ಹೊಂದಿದ್ದು ಬೆಳಿಗ್ಗೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

Pic: Vasudev Marati Hosoor