ಬೈಂದೂರು: ಐತಿಹಾಸಿಕ ಪ್ರಸಿದ್ದ ಶ್ರೀ ಸೋಮೇಶ್ವರ ದೇವಸ್ಥಾನ ಪಡುವರಿ ಬೈಂದೂರು ಇದರ ಮಹಾಶಿವರಾತ್ರಿ ಮಹೋತ್ಸವ ಬುಧವಾರ ನಡೆಯಿತು. ಬೆಳಿಗ್ಗೆ ದೇವರ ಸನ್ನಿಧಿಯಲ್ಲಿ ರುದ್ರಾಭಿಷೇಕ,ರುದ್ರಹೋಮ,ಬಿಲ್ವರ್ಚನೆ,ವಿಶೇಷ ಪೂಜೆ ನಡೆಯಿತು.ಸಾವಿರಾರು ಭಕ್ತಾಧಿಗಳು ದೇವರ ದರ್ಶನ ಪಡೆದು ಪುನೀತರಾದರು.ಸಂಜೆ ತಾಲೂಕು ಮಟ್ಟದ ಭಜನಾ ಕುಣಿತ ಸ್ಪರ್ಧೆ ನಡೆಯಲಿದೆ.

ಮಹತೋಭಾರ ಶ್ರೀಸೇನೇಶ್ವರ ದೇವಸ್ಥಾನ ಬೈಂದೂರು
ಮಹತೋಭಾರ ಶ್ರೀಸೇನೇಶ್ವರ ದೇವಸ್ಥಾನ ಬೈಂದೂರಿನಲ್ಲಿ ಮಹಾಶಿವರಾತ್ರಿ ಉತ್ಸವ ಬುಧವಾರ ನಡೆಯಿತು.ಬೆಳಿಗ್ಗೆ ಸಾಮೂಹಿಕ ನವಗ್ರಹಯುಕ್ತ ರುದ್ರಹೋಮ,ಸಂಜೆ ಶತರುದ್ರ,ಮಹಾಮಂಗಳಾರತಿ,ಪನಿವಾರ ವಿತರಣೆ,ರಾತ್ರಿ ಮಹಾಮಂಗಳಾರತಿ ನಗರೋತ್ಸವ ಹಾಗೂ ಮುಂತಾದ ಕಾರ್ಯಕ್ರಮ ನಡೆಯಲಿದೆ.ಈ ಸಂದರ್ಭದಲ್ಲಿ ನೂರಾರು ಭಕ್ತರು ಪಾಲ್ಗೊಂಡರು.

ಮೇಲ್ಪಂಕ್ತಿ ಎರಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ.
ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ಮಹಾಶಿವರಾತ್ರಿ ಉತ್ಸವ ಬುಧವಾರ ನಡೆಯಿತು.ಬೆಳಿಗ್ಗೆ ದೇವಸ್ಥಾನದಲ್ಲಿ ಅರ್ಚಕರಾದ ಲಕ್ಷ್ಮೀನಾರಾಯಣ ಭಟ್ ಇವರ ನೇತ್ರತ್ವದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು.ರಾತ್ರಿ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.
