ಶಿರೂರು; ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ವೇಳೆ ವಿದ್ಯಾರ್ಥಿನಿಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಿಸಿ ಪರಾರಿಯಾದ ಘಟನೆ ಶಿರೂರು ಗ್ರಾಮದ ಅಳ್ವೆಗದ್ದೆ ಎಂಬಲ್ಲಿ ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ ನಡೆದಿದೆ.
ಕುಂದಾಪುರ ಕಾಲೇಜಿನಿಂದ ಕರಿಕಟ್ಟೆ ಕ್ರಾಸ್ ಬಳಿ ಬಸ್ ಇಳಿದು ಅಳ್ವೆಗದ್ದೆ ರಸ್ತೆಯಲ್ಲಿಮನೆಗೆ ಹೋಗುತ್ತಿದ್ದ ವೇಳೆ ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವಿದ್ಯಾರ್ಥಿನಿಯ ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ ಸುಮಾರು 81 ಸಾವಿರ ಮೌಲ್ಯದ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದಾರೆ.ಸಂಜೆಯ ಹೊತ್ತಿಗೆ ಈ ರೀತಿಯ ಕಳ್ಳತನ ನಡೆದಿರುವುದು ಸಾರ್ವಜನಿಕರಿಗೆ ಆತಂಕ ಉಂಟು ಮಾಡಿದೆ.ಅಪರಿಚಿತ ಮತ್ತು ಸಂಶೆಯಾಸ್ಪದ ವ್ಯಕ್ತಿಗಳು ಸುತ್ತಾಡುವುದು ಕಂಡು ಬಂದರೆ ತಕ್ಷಣ ಬೈಂದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುವುದಾಗಿದೆ.ಈ ಬಗ್ಗೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.