ಬೈಂದೂರು: ಬೈಂದೂರು ತಾಲೂಕು ಇತಿಹಾಸ ಪ್ರಸಿದ್ಧ ಯಡ್ತರೆ,ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಪರಿವಾರ ಶಕ್ತಿಗಳ ಗರಡಿ ಇದರ ದಿವ್ಯ ಸನ್ನಿಯಲ್ಲಿ ತೃತೀಯ ಪ್ರತಿಷ್ಠಾ ವರ್ಧಂತ್ಯೋತ್ಸವ,ಸಾನಿಧ್ಯ ಕಲಶೋತ್ಸವ,ಅನ್ನಸಂತರ್ಪಣೆ,ಬೈದರ್ಕಳ ಸಂದರ್ಶನ,ಅಗೇಲು ಸೇವೆ,ಪಂಜುರ್ಲಿ ಕೋಲ ಸೇವೆ ಹಾಗೂ ಗೆಂಡ ಸೇವೆ ಜ.25 ಹಾಗೂ 26 ರಂದು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.