ಶಿರೂರು: ಸಮರ ಬೈರವ ವೀರ ಸೈನಿಕರ ಸ್ಮರಣ ಸಮಿತಿ ಜೋಗೂರು ಇದರ ವತಿಯಿಂದ ನಿವೃತ್ತ ಯೋಧರಿಗೆ ಸಮ್ಮಾನ ಹಾಗೂ ಸಮರ ಬೈರವ -2025 ಪ್ರಶಸ್ತಿ ಪ್ರಧಾನ ಸಮಾರಂಭ ಜ.26 ರಂದು ನಡೆಯಲಿದೆ.ಬೆಳಿಗ್ಗೆ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಬೈಕ್ ರ್‍ಯಾಲಿ ಬಳಿಕ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಮತ್ತು ರಕ್ತನಿಧಿ ಕೇಂದ್ರ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಬ್ರಹತ್ ರಕ್ತದಾನ ಶಿಬಿರ,ಸಂಜೆ 5ಕ್ಕೆ ಗಣ್ಯರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ .ಸಂಜೆ 7:30ಕ್ಕೆ ಓಂಕಾರ ಕಲಾವಿದರು ತೆಕ್ಕಟ್ಟೆ ಇವರಿಂದ ನಗೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಧುಕರ ಬಿಲ್ಲವ ಜೋಗೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.