ಬೈಂದೂರು: ಶ್ರೀ ಕಾಡಿಕಾಂಬಾ ದೇವಸ್ಥಾನ ದೊಂಬೆ ಶಿರೂರು ಇದರ ವಾರ್ಷಿಕ ಹಾಲು ಹಬ್ಬ ಜ.14 ಮತ್ತು 15ರಂದು ನಡೆಯಲಿದೆ.ಜ.14ರಂದು ಮದ್ಯಾಹ್ನ ಸಂಕ್ರಾಂತಿ ಪೂಜೆ,ಮಹಾಪೂಜೆ,ರಾತ್ರಿ 8ಕ್ಕೆ ಗೆಂಡ ಸೇವೆ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ.
ಜ.15 ರಂದು ಹಾಲು ಹಬ್ಬದ ಪ್ರಯುಕ್ತ ಬೆಳಿಗ್ಗೆ ದೇವಳದ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ.ಮದ್ಯಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ.ರಾತ್ರಿ 9;30ಕ್ಕೆ ಮಂದಾರ್ತಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟನೆಯಲ್ಲಿ ತಿಳಿಸಿದೆ.
