ಕುಂದಾಪುರ : ಡಿ.29 ರಂದು ನಡೆದ ಮರವಂತೆ-ಬಡಾಕೆರೆ ಸಹಕಾರಿ ಸಂಘದ ಚುನಾವಣೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜಗದೀಶ ಪಿ ಪೂಜಾರಿ ಹಾಗೂ ನರಸಿಂಹ ದೇವಾಡಿಗ ಅವರ ನೇತ್ರತ್ವದ ಗುಂಪು ಬಹುಮತವನ್ನು ಪಡೆದುಕೊಂಡಿದೆ. ಸಾಮಾನ್ಯ ಮೀಸಲು ಕ್ಷೇತ್ರದಿಂದ ಜಗದೀಶ ಪಿ ಪೂಜಾರಿ, ನರಸಿಂಹ ದೇವಾಡಿಗ, ಸತೀಶ್ಕುಮಾರ ಶೆಟ್ಟಿ, ಶ್ರೀನಿವಾಸ ಪೂಜಾರಿ, ಗಣೇಶ್ ಪೂಜಾರಿ, ಪ್ರಭಾಕರ ಎಂ ಖಾರ್ವಿ, ಹರೀಶ್ಚಂದ್ರ ಆಚಾರ್ಯ, ಮಹಿಳಾ ಮೀಸಲು ಕ್ಷೇತ್ರದಿಂದ ಲಕ್ಷ್ಮೀ, ಶಕುಂತಳಾ, ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಗಣೇಶ್ ಪೂಜಾರಿ, ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ವೀರೇಂದ್ರ ಹೆಗ್ಡೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಮ ಕಂತಿಹೊಂಡ ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸುರೇಶ್ ನಾಯ್ಕ್ ಆಯ್ಕೆಯಾಗಿದ್ದಾರೆ.