ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಾನಾಡು ಇದರ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲಾ ಸಭಾ ಭವನದಲ್ಲಿ ನಡೆಯಿತು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಾಧನೆಗೆ ವಿಶೇಷವಾದ ಮಾನ್ಯತೆಯಿದೆ.ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟರೆ ಸಾಧನೆಗೈಯಲು ಸಾಧ್ಯವಾಗುತ್ತದೆ.ಪಾಲಕರು ಹಾಗೂ ಸಮಾಜದ ಋಣ ತೀರಿಸಬೇಕಾದರೆ ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಯು ಅಗತ್ಯವಾಗಿರುತ್ತದೆ.ಶಿಕ್ಷಕರ ಆಸಕ್ತಿ ಶಾಲೆಯ ಪ್ರಗತಿಗೆ ಕಾರಣವಾಗಿರುತ್ತದೆ.ಗ್ರಾಮೀಣ ಭಾಗದಲ್ಲಿರುವ ಸಂಸ್ಥೆ ವಿನೂತನ ಚಿಂತನೆಗಳಿಂದ ಹಾಗೂ ಕ್ರಿಯಾಶೀಲ ವಿದ್ಯಾರ್ಥಿಗಳ ಪ್ರತಿಭೆಯಿಂದ ಗುರುತಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಜು ಬಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೆನರಾ  ಫೌಂಡೇಶನ್ ಬೆಂಗಳೂರು ಸುಬ್ರಮಣ್ಯ ಕೆ ಬಿ,ಬೈಂದೂರು ಪ.ಪಂ ನಾಮನಿರ್ದೇಶಿತ  ಸದಸ್ಯ ನಾಗರಾಜ ಗಾಣಿಗ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶೇಖರ್ ಪೂಜಾರಿ, ವಿಶ್ವನಾಥ್ ಪೂಜಾರಿ,ನಿವೃತ್ತ ಮುಖ್ಯೋಪಾಧ್ಯಾಯ ಅಣ್ಣಪ್ಪ ಶೇರುಗಾರ್,ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಧನಾಕ್ಷಿ ವಿಶ್ವನಾಥ್ ಪೂಜಾರಿ,ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಜು ದೇವಪ್ಪನಡಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಮಾರ ಮರಾಠಿ,ಮಾಜಿ ಅಧ್ಯಕ್ಷ ಗಣಪ ಜಿ ಮರಾಠಿ,ಉತ್ಸವ ಸಮಿತಿ ಅಧ್ಯಕ್ಷ ಸುಭಾಷ್ ಚಂದ್ರ ಶೇರುಗಾರ್,ಉದ್ಯಮಿ ಚನ್ನಯ್ಯ ಪೂಜಾರಿ, ನಾಗರಾಜ್ ಪೂಜಾರಿ,ಮುತ್ತಯ್ಯ ಮರಾಠಿ,ಪೌಲೂಸ್ ಪಿ ಜೆ,ಪತ್ರಕರ್ತ  ಅರುಣ್ ಕುಮಾರ್ ಶಿರೂರು,ಪವಾರ್ ನಾರಾಯಣ ಮರಾಠಿ,ದೇವಪ್ಪ ಹಂಡೆ,ಆರಕ್ಷಕ ಇಲಾಖೆಯ ಚಂದ್ರ ಮರಾಠಿ ಗಂಗಾನಾಡು, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಭಾಗಿರಥಿ,ರಾಜೇಶ್ವರಿ,ವಿದ್ಯಾರ್ಥಿ ನಾಯಕ ಸತ್ಯ ಶೇಷು ಮರಾಠಿ, ವಿದ್ಯಾರ್ಥಿ ನಾಯಕಿ  ಸಂಗೀತ, ಶಿಕ್ಷಕರಾದ ಶಾರದಾ, ಹೇಮಲತಾ, ಗೌರವ ಶಿಕ್ಷಕಿ ಜ್ಯೋತಿ, ಅಂಬಿಕಾ ಉಪಸ್ಥಿತರಿದ್ದರು.

ಮಾಜಿ ಶಾಸಕ  ಕೆ ಗೋಪಾಲ್ ಪೂಜಾರಿ ಶುಭಶಂಶನೆ ಗೈದರು.ಶಾಲಾ ಮುಖ್ಯೋಪಾಧ್ಯಾಯರಾದ ಪ್ರಭಾಕರ ಬಿಲ್ಲವ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗೌರಿ ಎಸ್ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ರಾಘವೇಂದ್ರ ಕೆ.ಎಸ್ ವಂದಿಸಿದರು.

 

Leave a Reply

Your email address will not be published. Required fields are marked *

fourteen − five =