ಉಪ್ಪುಂದ: ಕರಾವಳಿ ಸಮುದ್ರ ತೀರ ಪ್ರದೇಶದಲ್ಲಿ ಲೈಟ್ ಫಿಶಿಂಗ್ ವ್ಯಾಪಕವಾಗಿ ನಡೆಯುತ್ತಿದ್ದು ಇದರಿಂದ ಮೀನುಗಳ ಸಂತತಿ ಶೀಘ್ರ ನಾಶವಾಗುವ ಭೀತಿ ಎದುರಾಗಿದೆ. ರಾಜ್ಯದಲ್ಲಿ ಲೈಟ್ ಫಿಶಿಂಗ್ ನಿಷೇಧಿಸಿ ಸೂಕ್ತ ಕ್ರಮಕೈಗೊಂಡು ನಾಡದೋಣಿ ಮೀನುಗಾರರನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಮೀನುಗಾರರು ಜ.10ರಂದು ತ್ರಾಸಿ ಬೀಚ್ನಲ್ಲಿ ರಾ. ಹೆದ್ದಾರಿ ತಡೆ ನಡೆಸಿ ಬಹೃತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಅಳ್ವೆಕೋಡಿ ನಾಗೇಶ ಖಾರ್ವಿ ಹೇಳಿದರು. ಅವರು ಜ. 7ರಂದು ಉಪ್ಪುಂದ ನಾಡದೋಣಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಲೈಟ್ ಫಿಶಿಂಗ್ ಗೆ ಕಡಿವಾಣ ಹಾಕದೆ ಪರೋಕ್ಷವಾಗಿ ಇಲಾಖೆಗಳು ಸಹಕಾರ ನೀಡುತ್ತಿದೆ ಇದರಿಂದ ನಾಡದೋಣಿ ಮೀನುಗಾರರು ಸಂಕಷ್ಟ ಅನುಭವಿಸುವಂತೆ ಮಾಡಿದ್ದಾರೆ. ಮೀನುಗಾರರು ಮುಂದಿನ ದಿನಗಳಲ್ಲಿ ಬೀದಿಗೆ ಬರುವಂತೆ ಮಾಡುತ್ತಿದ್ದಾರೆ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ಎಂದರು.ಜ.10ರಂದು ನಡೆಯುವ ಪ್ರತಿಭಟನೆಯಲ್ಲಿ ಭಟ್ಕಳದಿಂದ ಗಂಗೊಳ್ಳಿಯ ವರೆಗಿನ ಸಾವಿರಕ್ಕೂ ಹೆಚ್ಚು ದೋಣಿಗಳನ್ನು ಸಮುದ್ರದಲ್ಲಿ ಲಗರು ಹಾಕಿ ಹಾ.ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದೇವೆ ಸೂಕ್ತ ಭರವಸೆ ಸ್ಪಂದನೆ ಸಿಗದೆ ಹೋದರೆ ಜಿಲ್ಲಾ ಆಡಳಿತ ಕಚೇರಿ ಎದುರು ಧರಣಿ ನಡೆಸಲು ತಿರ್ಮಾನಿಸಿದ್ದೇವೆ ಎಂದರು.
ರಾಜ್ಯ ಒಕ್ಕೂಟದ ಗೌರವ ಸಲಹೆಗಾರ ಮದನ್ ಕುಮಾರ್ ಉಪ್ಪುಂದ ಬೆಳಕು ಬಳಸಿ ಮೀನುಗಾರಿಕೆಯಿಂದ ಮೀನುಗಳ ಸಂತತಿಯ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಲೈಟ್ ಫಿಶಿಂಗ್ಗೆ ನಿಷೇಧಿಸಿ ನ್ಯಾಯಾಲಯ ಆದೇಶ ನೀಡಿದೆ. ಮೀನುಗಾರಿಕೆ ಸಚಿವರು ಸದನದಲ್ಲಿ ನಿಷೇಧ ಇದೆ ಎಂದು ಹೇಳಿ ಉತ್ತರ ನೀಡಿದ್ದಾರೆ. ಆದರೆ ಹೊರಗಡೆ ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ನಾಡದೋಣಿ ಮೀನುಗಾರರಿಗೆ ಅನ್ಯಾಯ ಉಂಟು ಮಾಡುತ್ತಿದ್ದಾರೆ ಇದರಿಂದ ಮೀನುಗಾರರ ಬದುಕು ಬೀದಿಗೆ ಬರುತ್ತದೆ. ರಾಜ್ಯದಲ್ಲಿ ಲೈಟ್ ಫಿಶಿಂಗ್ ನಿಲ್ಲುವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು.
ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯಶವಂತ್ ಬೆಳಕು ಮೀನುಗಾರಿಕೆಯಿಂದ ನಾಡದೋಣಿ ಮೀನುಗಾರರಿಗೆ ಉಂಟಾಗುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.ಬೆಳಕು ಮೀನುಗಾರಿಕೆಯಿಂದ ನಾಡದೋಣಿ ಮೀನುಗಾರರಿಗೆ ಉಂಟಾಗುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ನಾಗೇಶ ಖಾರ್ವಿ, ಸದಸ್ಯರಾದ ರಾಮ ಖಾರ್ವಿ, ಚಂದ್ರ ಖಾರ್ವಿ ಉಪ್ಪಸ್ಥಿತರಿದ್ದರು.
