ಬೈಂದೂರು: ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಕುಂದಾಪುರ ತಾಲೂಕು ಘಟಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತುನೂತನ ಅಧ್ಯಕ್ಷರಾಗಿ ಪ್ರಕಾಶ್ ರಾಥೋಡ್ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಪ್ರಕಾಶ್ ಸುವರ್ಣ,ಉಪಾಧ್ಯಕ್ಷರಾಗಿ ಆನಂದ್ ಕುಮಾರ್ ಓ,ದೀಪಿಕಾ ಶೆಟ್ಟಿ, ನೂತನ ಕಾರ್ಯದರ್ಶಿಯಾಗಿ ವಿಶ್ವನಾಥ,ಜೊತೆ ಕಾರ್ಯದರ್ಶಿಯಾಗಿ ಅಫ್ರೋಜ್,ಖಜಾಂಚಿಯಾಗಿ ವಿಘ್ನೇಶ್ ಉಪಾಧ್ಯ,ಸಂಘಟನಾ ಕಾರ್ಯದರ್ಶಿಯಾಗಿ ಅಭಿಲಾಷ್,ಜಿಲ್ಲಾ ಸಂಘದ ಪ್ರತಿನಿಧಿಯಾಗಿ ಶಿವರಾಯ,ಕ್ರೀಡಾ ಕಾರ್ಯದರ್ಶಿಯಾಗಿ ಸೋಮಪ್ಪ ಹೆಬ್ಬಾಳ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.