ಶಿರೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು,ಶಾಲಾಭಿವೃದ್ದಿ ಸಮಿತಿ,ಮಾನಸ ಮಿತ್ರ ಮಂಡಳಿ ಆಲಂದೂರು,ಶಾಲಾ ಹಳೆ ವಿದ್ಯಾರ್ಥಿ ಸಂಘ,ಶ್ರೀ ಗಣೇಶ ಯುವಕ ಸಂಘ,ಸ್ತ್ರೀಶಕ್ತಿ ಸಂಘ,ಧ.ಗ್ರಾ.ಯೋಜನೆ ಆಲಂದೂರು ಒಕ್ಕೂಟ,ಜೆಸಿಐ ಶಿರೂರು,ಶಾಲಾ ವಿದ್ಯಾರ್ಥಿಗಳು,ವಿದ್ಯಾರ್ಥಿ ಪೋಷಕರು ಹಾಗೂ ಊರಿನ ಗ್ರಾಮಸ್ಥರ ವತಿಯಿಂದ ಕಳೆದ 16 ವರ್ಷಗಳಿಂದ ಆಲಂದೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮಾಧವ ಬಿಲ್ಲವ ಇವರ ಬೀಳ್ಕೋಡುಗೆ ಸಮಾರಂಭ ಆಲಂದೂರು ಸ.ಕಿ.ಪ್ರಾ.ಶಾಲೆಯ ಸಭಾಭವನದಲ್ಲಿ ನಡೆಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮುನುಷ್ಯನಾಗಿ ಬದುಕಿದ ಮೇಲೆ ಜೀವನಕ್ಕಾಗಿ ಒಂದು ಕ್ಷೇತ್ರದ ಆಯ್ಕೆ ಸಹಜ ಪ್ರಕ್ರಿಯೆ ಆಗಿರುತ್ತದೆ.ಆದರೆ ಆಯ್ಕೆ ಮಾಡಿದ ಕ್ಷೇತ್ರ ಬದುಕಿಗೆ ಸಾರ್ಥಕತೆ ಕೊಡುತ್ತದೆ.ಶಿಕ್ಷಕನಾಗಿ ಸೇವೆ ಸಲ್ಲಿಸುವ ಅವಕಾಶ ಶ್ರೇಷ್ಟ ಕಾಯಕವಾಗಿದೆ.ಸೇವಾ ಅವಧಿಯಲ್ಲಿ ನೀಡಿದ ಸಾರ್ಥಕತೆ,ಸಾರ್ವಜನಿಕರ ವಿಶ್ವಾಸ,ಶಿಕ್ಷಣಾಭಿಮಾನಿಗಳ ಪ್ರೀತಿ, ವಿದ್ಯಾಭಿಮಾನಿಗಳ ಅಭಿಮಾನ ಬಹಳಷ್ಟು ಸಂತೃಪ್ತಿ ನೀಡಿದೆ.ನಿವೃತ್ತಿ ವೃತ್ತಿಗೆ ಮಾತ್ರ. ಬದುಕಿನ ಉತ್ಸಾಹಕ್ಕೆ ಸದಾ ಕ್ರಿಯಾಶೀಲವಾಗಿರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ವಿನ್ನಿ ಫೆರ್ನಾಂಡೀಸ್,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿನಾಯಕ ಗಾಣಿಗ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ ಮಾಕೋಡಿ,ಮಾನಸ ಮಿತ್ರ ಮಂಡಳಿ ಅಧ್ಯಕ್ಷ ರಂಜಿತ್ ಗಾಣಿಗ,ಊರಿನ ಹಿರಿಯರಾದ ಶಾಂತಾನಂದ ಶೆಟ್ಟಿ,ಪ್ರಭಾರ ಸಿ.ಆರ್.ಬಿ ಸಿ .ಎನ್ ಬಿಲ್ಲವ,ಶಿರೂರು ಜೆಸಿಐ ಅಧ್ಯಕ್ಷ ಸತೀಶ ಕೊಠಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ನಿವೃತ್ತ ಮುಖ್ಯ ಶಿಕ್ಷಕರನ್ನು ಸಮ್ಮಾನಿಸಲಾಯಿತು.ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಅಶ್ವಿನಿ ಕೊಠಾರಿ ಸ್ವಾಗತಿಸಿದರು.ಗೌರವ ಶಿಕ್ಷಕಿ ಶಿಲ್ಪಾ ಭಟ್ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಪ್ರಕಾಶ ಮಾಕೋಡಿ ವಂದಿಸಿದರು.
ವರದಿ/ಗಿ ರಿ ಶಿರೂರು
ಚಿತ್ರ: ಸುರೇಶ್ ಮಾಕೋಡಿ