ಶಿರೂರು: ಶಿರೂರು ಚಾರೋಡಿ ಮೇಸ್ತ ಸಮಾಜ ಬಾಂಧವರ ನೇತ್ರತ್ವದಲ್ಲಿ ಚಾರೋಡಿ ಮೇಸ್ತ ಸಮಾಜ ಬಾಂಧವರಿಗೆ ಪ್ರಪ್ರಥಮ ಬಾರಿಗೆ ಚಾರೋಡಿ ಪ್ರಿಮಿಯರ್ -2025 ಕ್ರಿಕೆಟ್ ಪಂದ್ಯಾಟ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಕ್ರೀಡೆಗಳು ಜನರ ನಡುವೆ ಸಾಮರಸ್ಯ ಬೆಳೆಸುತ್ತದೆ ಇಂತಹ ಕ್ರೀಡೆಗಳ ಮುಖಾಂತರ ಸಂಘಟಿತರಾಗಿ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರದೀಪ್ ಎಸ್ ಮೇಸ್ತ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ದಿನೇಶ್,ರತ್ನಕರ ಆರ್. ಮೇಸ್ತ,ವಿಠ್ಠಲ್ ಎನ್.ಮೇಸ್ತ,ಕೇಶವ ಮೇಸ್ತ, ಶೇಷಗಿರಿ ಮೇಸ್ತ, ಶಂಕರ ಡಿ ಮೇಸ್ತ ,ಗೀತಾ ವಿ.ಮೇಸ್ತಹಾಗೂ 8 ತಂಡಗಳ ಮಾಲಕರು ಉಪಸ್ಥಿತರಿದ್ದರು.


ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರದೀಪ್ ಎಸ್.ಮೇಸ್ತ ಮಾಲಕತ್ವದ ಓಂಕಾರ್ 11 ತಂಡ ಪ್ರಥಮ ಸ್ಥಾನ ಪಡೆಯಿತು ಹಾಗೂ ಪ್ರಕಾಶ್ ಯು ಮೇಸ್ತ ಮಾಲಕತ್ವದ ಶ್ರವಣ್ ಕ್ರಿಕೆಟರ್ಸ್ ದ್ವಿತೀಯ ಸ್ಥಾನ ಪಡೆದರು.ಪುರುಷೋತ್ತಮ್ ಮೇಸ್ತ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು ಹಾಗೂ ಪ್ರಜ್ವಲ್ ಬಿ.ಮೇಸ್ತ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.