ಬೈಂದೂರು: ಪ್ರತಿಷ್ಟಿತ ಬೈಂದೂರು ವ್ಯವಸಾಯ ಸೇವಾ ಸಹಕಾರ ಸಂಘ ಇದರ ಮುಂದಿನ ಐದು ವರ್ಷದ ಅವಧಿಯ ನಿರ್ದೇಶಕ ಮಂಡಳಿಯ ಚುನಾವಣೆ ಡಿಸೆಂಬರ್ 26 ರಂದು ನಡೆಯಲಿದೆ. ಬಿರುಸಿನ ಚುನಾವಣಾ ಪ್ರಚಾರ ನಡೆಯುತ್ತಿದ್ದು ಯಶಸ್ವಿ ಚುನಾವಣೆ ನಡೆಸಲು ಇಲಾಖೆ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ.ಈ ಕುರಿತು ಪ್ರತಿಕ್ರಯಿಸಿದ ಹಾಲಿ ಅಧ್ಯಕ್ಷರಾದ ನಾರಾಯಣ ಹೆಗ್ಡೆ ಸುಮಾರು ಅರವತ್ತು ವರ್ಷದ ಹಿನ್ನಲೆ ಹೊಂದಿದ್ದು ಒಂಬತ್ತು ಶಾಖೆ ಹೊಂದಿದೆ.ಈ ವರ್ಷ ಸುಮಾರು ಮೂರು ಕೋಟಿ ಸ್ವಂತ ಕಟ್ಟಡ ನಿಧಿ ಬಳಸಿ ಅತ್ಯಾಧುನಿಕ ಸೌಕರ್ಯದ ಪ್ರಧಾನ ಕಛೇರಿ ಟೆಂಡರ್ ಪೂರ್ಣಗೊಂಡು ನಿರ್ಮಾಣ ವಾಗಲಿದೆ.ವ್ಯವಸ್ಥಿತ ಚುನಾವಣೆ ನಡೆಸಲು ಹಾಗೂ ಸಂಘದ ಮುಂದಿನ ಯೋಜನೆಗಳ ಸಾಕಾರಕ್ಕೆ ಎಲ್ಲ ಸಿದ್ದತೆ ನಡೆಸಿದ್ದು ಯಶಸ್ವಿಯಾಗಿ ಚುನಾವಣೆ ನಡೆಯಲಿದೆ.ಇದರ ಜೊತೆಗೆ ಗುರುತು ಚೀಟಿ ಇಲ್ಲದ ಸದಸ್ಯರಿಗೆ ಚುನಾವಣಾ ದಿನಾಂಕದವರಗೆ ಗುರುತು ಪತ್ರ ನೀಡಲು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದು ಅಧಿಕಾರಿಗಳು ಕೂಡ ಗುರುತು ಚೀಟಿ ನೀಡುವ ಭರವಸೆ ನೀಡಿದ್ದಾರೆ.ಸದಸ್ಯರು ಮತದಾನ ಪ್ರಕ್ತಿಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ಪೂರ್ಣಗೊಳಿಸಬೆಕೆಂದು ತಿಳಿಸಿದರು.