ಬೈಂದೂರು: ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯದ ಜೊತೆಗೆ
ಮರಾಠಿ ಸಮುದಾಯದ ಜನರ ಆಸಕ್ತಿ ಮತ್ತು ಪ್ರತಿಭೆ ರಂಗ ಭೂಮಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವಂತಾಗಿದೆ.ಸಂಚಲನ ಹೊಸೂರು ಇದರ ಸಾಂಸ್ಕ್ರತಿಕ ಆಸಕ್ತಿ ಶ್ಲಾಘನೀಯ ಎಂದರು.ಎಂದು ಬೈಂದೂರು ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ ಶೆಟ್ಟಿ ಹೇಳಿದರು ಅವರು ಸಂಚಲನ(ರಿ.)ಹೊಸೂರು ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ವತಿಯಿಂದ ಹೊಸೂರಿನಲ್ಲಿ ನಡೆದ ವನಸಿರಿಯಲ್ಲೊಂದು ರಂಗ ಸುಗ್ಗಿ ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಸಂಸ್ಥೆಯ ಅಧ್ಯಕ್ಷ ಮಹಾದೇವ ಮರಾಠಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಅರುಣ್ ಕುಮಾರ್ ಶಿರೂರು,ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್,ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ,ಶಿರೂರು ಜೆಸಿಐ ಅಧ್ಯಕ್ಷ ಸತೀಶ ಕೊಠಾರಿ,ಮಹಾದೇವ ಪೂಜಾರಿ ಕಿಸ್ಮತ್ತಿ,ಜನಾರ್ಧನ ಪೂಜಾರಿ ಅತ್ತಿಕೇರಿ,ಗೌರವಾಧ್ಯಕ್ಷ ತಿಮ್ಮ ಮರಾಠಿ,ಸಿನಿ ಕಲಾವಿದ ಆರ್.ಜೆ.ಉದಯ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಜೋಗಿಜಡ್ಡು ರವರನ್ನು ಸಮ್ಮಾನಿಸಲಾಯಿತು.
ಸಂಚಲನ ಸಂಸ್ಥೆಯ ಖಜಾಂಚಿ ನಾಗಪ್ಪ ಮರಾಠಿ ಸ್ವಾಗತಿಸಿದರು.ಶಿಕ್ಷಕ ಸುಧಾಕರ .ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ರಾಜು ಮರಾಠಿ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಸುರೇಶ್ ಮಕೋಡಿ ಆಲಂದೂರು