ಶಿರೂರು: ದಿನ್ನಾ ಪ್ರೆಂಡ್ಸ್ ಕ್ರಿಕೆಟರ್‍ಸ್ ಶಿರೂರು ಹಾಗೂ ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ ಇವರ ನೇತ್ರತ್ವದಲ್ಲಿ ನಡೆಯಲಿರುವ 6ನೇ ವರ್ಷದ ಹೊನಲು ಬೆಳಕಿನ 30 ಗಜಗಳ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾಟ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಪಿ ಡಿಸೆಂಬರ್ 21 ಹಾಗೂ 22 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಲಿದೆ.ಪ್ರಥಮ ಬಹುಮಾನ 44,444, ದ್ವಿತೀಯ 33,333 ಹಾಗೂ ಹಾಗೂ ವಯಕ್ತಿಕ ಪ್ರಶಸ್ತಿಗಳು ದೊರೆಯಲಿದೆ ಎಂದು ದಿನಕರ ಶಿರೂರು ಹಾಗೂ ಉದಯ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.