ಬೈಂದೂರು: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉಡುಪಿ ಜಿಲ್ಲೆಯ ಬೆಳವಣಿಗೆಯನ್ನು ಸರ್ವನಾಶ ಮಾಡಬೇಕೆಂದು ಪಣ ತೊಟ್ಟಂತಿದೆ.ಜಿಲ್ಲೆಯಲ್ಲಿ ಐದು ಜನ ಶಾಸಕರಿದ್ದಾರೆ.ಕಾಂಗ್ರೆಸ್‌ಗೆ ಮುಖಭಂಗವಾಗಿದೆ ಎಂಬ ಕಾರಣಕ್ಕೆ ಸಾಮಾನ್ಯ ಜನರ ದುಡಿಮೆಯ ಮೇಲೆ ಕಲ್ಲು ಹಾಕಿದ್ದಾರೆ.ನಮಗೆ ಇವರ ಬಿಟ್ಟಿ ಭಾಗ್ಯಗಳು ಬೇಕಿಲ್ಲ.ಬದಲಾಗಿ ಈ ಜಿಲ್ಲೆಯಲ್ಲಿ ದೊರೆಯುವ ನಮ್ಮದೆ ಸಂಪನ್ಮೂಲವನ್ನು ಉಪಯೋಗಿಸಿಕೊಂಡು ಬದುಕಲು ಅವಕಾಶ ನೀಡಿದರೆ ಸಾಕು.ಬೈಂದೂರಿನಲ್ಲಿ ಕಲ್ಲುಕೋರೆ ಲಾರಿ ಮತ್ತು ಪುನರಾರಂಭ ವಿಳಂಬಕ್ಕೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಬಳಗದವರ ರಾಜಕೀಯ ಕುತಂತ್ರವೇ ಕಾರಣ ಎಂದು ಬೈಂದೂರು ತಾಲೂಕು ಕೋರೆ ಮತ್ತು ಲಾರಿ ಮಾಲಕರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ನೆಲ್ಯಾಡಿ ಹೇಳಿದ್ದಾರೆ ಅವರು ಬುಧವಾರ ಬೈಂದೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕಲ್ಲುಕೋರೆ ಸಮಸ್ಯೆ ಪರಿಹಾರಕ್ಕೆ ಸರಕಾರದ ಗಮನ ಸೆಳೆಯಲು ಶಾಸಕರ ನೇತ್ರತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.ಆದರೆ ಕಾಂಗ್ರೆಸ್ ಮುಖಂಡರು ರಾಜಕೀಯ ಲಾಭಕ್ಕಾಗಿ ಜನರ ದಿಕ್ಕು ತಪ್ಪಿಸಿದ್ದಾರೆ.ಕಳೆದ ಮೂರು ತಿಂಗಳಿಂದ ಶಾಸಕರು, ಜಿಲ್ಲಾಧಿಕಾರಿಗಳು,ಸಚಿವರು ಎಲ್ಲರಿಗೂ ಮನವಿ ನೀಡಲಾಗಿದೆ.ಸರಕಾರ ಬಡ ಜನರ ಬದುಕನ್ನು ಬೀದಿಗೆ ತಂದಿದೆ.ಈ ಬಗ್ಗೆ ಶಾಸಕರು ಪ್ರತಿಭಟನೆ ಮೂಲಕ ಗಮನ ಸೆಳೆಯುವುದು ಅನಿವಾರ್‍ಯವಾಗಿದೆ.ಮೂರು ತಿಂಗಳು ಎನೂ ಕೂಡ ಪ್ರಯತ್ನ ಮಾಡದೆ ಈಗ ಜನರು ರೊಚ್ಚಿಗೆದ್ದ ಬಳಿಕ ಸರಕಾರದ ಗಮನಕ್ಕೆ ತಂದು ಪ್ರಯತ್ನಿಸುತ್ತೇವೆ ಎನ್ನುವುದು ಮಾಜಿ ಶಾಸಕರ ರಾಜಕೀಯ ನಾಟಕ ಮತ್ತು ಕಾಂಗ್ರೆಸ್ ಬಳಗದ ಡ್ರಾಮಾ ನಿಲ್ಲಿಸಲಿ.ಶಾಸಕರು ಸರಕಾರ ಇಲ್ಲದಿದ್ದರು ದಾನಿಗಳ ನೆರವಿನಿಂದ ಇರುವ ಅವಕಾಶದಲ್ಲಿ ದಾಖಲೆಯ ಅಭಿವೃದ್ದಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರ ದಬ್ಬಾಳಿಕೆ ನಡೆಯಲ್ಲ: ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಉದ್ಯಮಿಯೊಬ್ಬರು ನಾನು ಕಲ್ಲುಕೋರೆ ಸಂಘದ ಅಧ್ಯಕ್ಷನಲ್ಲ ಎಂದಿದ್ದಾರೆ.ನಮ್ಮದು ಕಾನೂನು ಪ್ರಕಾರ ನೊಂದಾವಣಿಯಾದ ಸಂಘವಾಗಿದೆ.ಕಾಂಗ್ರೆಸ್ ಪಕ್ಷದ ದಬ್ಬಾಳಿಕೆ, ಹೆದರಿಸುವುದು ಇದು ಹೊಸತಲ್ಲ.ಗ್ರಾಮೀಣ ಭಾಗದಲ್ಲಿ ಹೆದರಿಸಿ ಕಲ್ಲು ಕೋರೆಯವರಿಗೆ ದಬ್ಬಾಳಿಕೆ, ದಮ್ಕಿ ನೀಡುವ ಇವರ ದಬ್ಬಾಳಿಕೆಗೆ ಯಾರು ಹೆದರೋದಿಲ್ಲ ಮತ್ತು ಈ ಅಹಂಕಾರ ಬೈಂದೂರಿನಲ್ಲಿ ನಡೆಯೋದಿಲ್ಲ ಎಂದರು.
ಶಾಸಕರು ನೀಡಿದ ಅವಧಿಯೊಳಗೆ ಕಲ್ಲುಕೋರೆ ಪುನರಾರಂಭಿಸಲು ಜಿಲ್ಲಾಡಳಿತ ಅನುಮತಿ ನೀಡದಿದ್ದರೆ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ನಡೆಯದಿರುವ ಬ್ರಹತ್ ಹೋರಾಟ ಜಿಲ್ಲಾಡಳಿತ ಮತ್ತು ಸರಕಾರದ ವಿರುದ್ದ ನಡೆಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ,ಮಾಜಿ ತಾ.ಪಂ ಸದಸ್ಯ ಕರಣ್ ಪೂಜಾರಿ,ಖಜಾಂಚಿ ಗಣೇಶ ದೇವಾಡಿಗ ಹೇರಂಜಾಲು,ಗೋಪಾಲ ಪೂಜಾರಿ ವಸ್ರೆ,ಶ್ರೀಗಣೇಶ ಉಪ್ಪುಂದ ಹಾಜರಿದ್ದರು.

ವರದಿ/ಶಿರೂರು ಡಾಟ್ ಕಾಮ್